ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನವಾಗಿ ಆರು ತಿಂಗಳು ಕಳೆದರೂ, ಅವರೆಡೆಗಿನ ಜನರ ಅಭಿ​ಮಾನ ಕಿಂಚಿತ್ತೂ ಕಡಿಮೆಯಾದಂತೆ ಕಂಡು​ಬರುತ್ತಿಲ್ಲ. ಇಲ್ಲಿನ ಮರೀನಾ ಬೀಚ್‌ನಲ್ಲಿರುವ ಅವರ ಸಮಾಧಿಗೆ ಈಗಲೂ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಚೆನ್ನೈ(ಮೇ.22): ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನವಾಗಿ ಆರು ತಿಂಗಳು ಕಳೆದರೂ, ಅವರೆಡೆಗಿನ ಜನರ ಅಭಿ​ಮಾನ ಕಿಂಚಿತ್ತೂ ಕಡಿಮೆಯಾದಂತೆ ಕಂಡು​ಬರುತ್ತಿಲ್ಲ. ಇಲ್ಲಿನ ಮರೀನಾ ಬೀಚ್‌ನಲ್ಲಿರುವ ಅವರ ಸಮಾಧಿಗೆ ಈಗಲೂ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಪುರುಷರು ಮತ್ತು ಮಹಿಳೆಯರು, ಯುವಕ ರಿಂದ ವೃದ್ಧರ ಆದಿಯಾಗಿ ನಿತ್ಯ ಸುಮಾರು 15,000 ಮಂದಿ ಜಯಾ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿ ನವರು ಮಹಿಳೆಯರಾಗಿದ್ದು, ಅವರಿಗೆ ‘ಅಮ್ಮಾ' ಈಗಲೂ ಆರಾಧನಾ ವ್ಯಕ್ತಿಯಾಗಿದ್ದಾರೆ.

ಗ್ರಾಮೀಣ ಜನರು ಜಯಲಲಿತಾರನ್ನು ಈಗಲೂ ತಮ್ಮ ತಾಯಿ (ಅಮ್ಮಾ) ಎಂದೇ ಭಾವಿಸಿಕೊಂಡಿದ್ದಾರೆ. ಜಯಾ ಸಿಎಂ ಆಗಿದ್ದಾಗ ಅಮ್ಮಾ ಹೆಸರಿನಲ್ಲಿ ಜಾರಿಗೆ ತಂದ ಯೋಜನೆಯ ಬಗ್ಗೆ ಜನರು ಮಾತಾಡಿಕೊಳ್ಳುತ್ತಿದ್ದಾರೆ. ಸಮಾಧಿ ಸ್ಥಳದಲ್ಲಿ ಜಯಲಲಿತಾ ಅವರ ಎರಡು ಭಾವಚಿತ್ರಗಳನ್ನು ಹಾಕಲಾಗಿದ್ದು, ಒಂದು ಬೃಹತ್‌ ಭಾವಚಿತ್ರ ಮತ್ತು ಇನ್ನೊಂದು ಸಣ್ಣದಾದ ಫೋಟೋವನ್ನು ಸಮಾಧಿಯ ಮೇಲೆ ಇಡಲಾಗಿದೆ.