ಎಚ್.ಡಿ.ದೇವೇಗೌಡ ಅವರ ಅವಧಿಯಲ್ಲಿ ರಾಜ್ಯದ ಹಿಂದುಳಿದ ವರ್ಗ ವಿದ್ಯಾರ್ಥಿಗಳ ವಸತಿ ಶಾಲೆಗಳಿಗೆ ಮೊರಾರ್ಜಿ ದೇಸಾಯಿಯವರ ಹೆಸರಿಡಲಾಗಿತ್ತು. ಭಾರತದ ಪ್ರಪ್ರಥಮ ಕಾಂಗ್ರೆಸ್ಸೇತರ ಸರಕಾರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದರ ನೆನಪಿಗಾಗಿ ದೇವೇಗೌಡ ಈ ನಿರ್ಧಾರ ಕೈಗೊಂಡಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಹೆಣ್ಮಕ್ಕಳ ವಸತಿ ಶಾಲೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರಿಡಲಾಗಿತ್ತು. ಇದೀಗ, ಕಾಂಗ್ರೆಸ್ ಸರಕಾರವು ಇಡೀ ವಸತಿ ಶಾಲೆಗಳನ್ನು ಇಂದಿರಾಮಯ ಮಾಡುತ್ತಿದೆ.
ಬೆಂಗಳೂರು(ಆ. 16): ನಾಡ ಪ್ರೇಮದ ಬಗ್ಗೆ ಭಾಷಣ ಮಾಡುವ ರಾಜ್ಯ ಸರಕಾರ ಈಗ ರಾಜ್ಯವನ್ನು ಇಂದಿರಾಮಯ ಮಾಡಲು ಹೊರಟಂತಿದೆ. ಇಂದಿರಾ ಕ್ಯಾಂಟೀನ್ ಆಯ್ತು ಈಗ ವಸತಿ ಶಾಲೆಗಳಿಗೆ ಇಂದಿರಾ ಗಾಂಧಿಯವರ ಹೆಸರಿಡಲು ಸರಕಾರ ನಿರ್ಧರಿಸಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಹೆಸರನ್ನೂ ಬದಲಿಸಿ ಇಂದಿರಾ ಗಾಂಧಿಯವರ ಹೆಸರನ್ನು ಇಡಲಾಗುತ್ತಿದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ವಸತಿ ಶಾಲೆಗಳಿಗೆ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಎಂದು ಹೆಸರಿಡಲಾಗಿದೆ. 2016-17ನೇ ಸಾಲಿನಲ್ಲಿ 278 ವಸತಿ ಶಾಲೆಗಳು ಮಂಜೂರಾಗಿವೆ. ಅವೆಲ್ಲವಕ್ಕೂ ಈಗ ಇಂದಿರಾ ಹೆಸರಿಡಲಾಗುತ್ತಿದೆ. ಆದರೆ, ಹಾಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮರುನಾಮಕರಣ ಮಾಡುವ ಪ್ರಕ್ರಿಯೆಯೂ ಆರಂಭವಾಗಿದೆ. ಈಗಾಗಲೇ ಕೆಲ ವಸತಿ ಶಾಲೆಗಳ ಹೆಸರನ್ನು ಬದಲಿಸಿದ್ದಾರೆನ್ನಲಾಗಿದೆ.
ಎಚ್.ಡಿ.ದೇವೇಗೌಡ ಅವರ ಅವಧಿಯಲ್ಲಿ ರಾಜ್ಯದ ಹಿಂದುಳಿದ ವರ್ಗ ವಿದ್ಯಾರ್ಥಿಗಳ ವಸತಿ ಶಾಲೆಗಳಿಗೆ ಮೊರಾರ್ಜಿ ದೇಸಾಯಿಯವರ ಹೆಸರಿಡಲಾಗಿತ್ತು. ಭಾರತದ ಪ್ರಪ್ರಥಮ ಕಾಂಗ್ರೆಸ್ಸೇತರ ಸರಕಾರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದರ ನೆನಪಿಗಾಗಿ ದೇವೇಗೌಡ ಈ ನಿರ್ಧಾರ ಕೈಗೊಂಡಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಹೆಣ್ಮಕ್ಕಳ ವಸತಿ ಶಾಲೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರಿಡಲಾಗಿತ್ತು. ಇದೀಗ, ಕಾಂಗ್ರೆಸ್ ಸರಕಾರವು ಇಡೀ ವಸತಿ ಶಾಲೆಗಳನ್ನು ಇಂದಿರಾಮಯ ಮಾಡುತ್ತಿದೆ.
ಕ್ಯಾಂಟೀನ್ ವಿಚಾರದಲ್ಲೂ ಹೀಗೇ ಆಯಿತು. ತಮಿಳುನಾಡಿನ "ಅಮ್ಮ" ಕ್ಯಾಂಟೀನ್ ಮಾದರಿಯಲ್ಲಿ ಕರ್ನಾಟಕದಲ್ಲೂ ಅಗ್ಗದ ಹಾಗೂ ಉತ್ತಮ ಗುಣಮಟ್ಟದ ಆಹಾರ ನೀಡುವ ಕ್ಯಾಂಟೀನ್ ಆರಂಭಿಸುವಾಗ ಸಿದ್ದರಾಮಯ್ಯ "ನಮ್ಮ ಕ್ಯಾಂಟೀನ್" ಎಂದು ಹೆಸರಿಡಲು ನಿರ್ಧರಿಸಿದ್ದರು. ಆದರೆ, ಇದೀಗ ಅವರು ತಮ್ಮ ನಿರ್ಧಾರ ಬದಲಿಸಿ "ಇಂದಿರಾ ಕ್ಯಾಂಟೀನ್" ಎಂದು ನಾಮಕರಣ ಮಾಡಿದ್ದಾರೆ.
ಯಡಿಯೂರಪ್ಪ ಆಕ್ರೋಶ:
ಕ್ಯಾಂಟೀನ್ ವಿಚಾರದಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಹೆಸರನ್ನು ಬದಲಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.