ಅಲಹಳ್ಳಿ ಕೆರೆಯಲ್ಲಿ ಮತ್ತೊಮ್ಮೆ ಬಯೋಮೆಡಿಕಲ್ ತ್ಯಾಜ್ಯಗಳನ್ನು ಎಸೆದಿರುವುದು ಪತ್ತೆಯಾಗಿದೆ. ಕಳೆದ ತಿಂಗಳಲ್ಲಿ ಕೂಡಾ ತ್ಯಾಜ್ಯಗಳಲ್ಲಿ ಹಾಕಲಾಗಿತ್ತು. ಫ್ರೇಜರ್ ಟೌನ್’ನಲ್ಲಿರುವ ಆಸ್ಪತ್ರೆಯೊಂದು ಈ ತ್ಯಾಜ್ಯಗಳನ್ನು ತಂದು ಹಾಕಿರುವುದು ತನಿಖೆಯಿಂದ ಗೊತ್ತಾಗಿದ್ದು, ಆಸ್ಪತ್ರೆಗೆ 5 ಲಕ್ಷ ರೂ ದಂಡ ವಿಧಿಸಲಾಗಿದೆ.
ಬೆಂಗಳೂರು (ಆ.01): ಅಲಹಳ್ಳಿ ಕೆರೆಯಲ್ಲಿ ಮತ್ತೊಮ್ಮೆ ಬಯೋಮೆಡಿಕಲ್ ತ್ಯಾಜ್ಯಗಳನ್ನು ಎಸೆದಿರುವುದು ಪತ್ತೆಯಾಗಿದೆ. ಕಳೆದ ತಿಂಗಳಲ್ಲಿ ಕೂಡಾ ತ್ಯಾಜ್ಯಗಳಲ್ಲಿ ಹಾಕಲಾಗಿತ್ತು. ಫ್ರೇಜರ್ ಟೌನ್’ನಲ್ಲಿರುವ ಆಸ್ಪತ್ರೆಯೊಂದು ಈ ತ್ಯಾಜ್ಯಗಳನ್ನು ತಂದು ಹಾಕಿರುವುದು ತನಿಖೆಯಿಂದ ಗೊತ್ತಾಗಿದ್ದು, ಆಸ್ಪತ್ರೆಗೆ 5 ಲಕ್ಷ ರೂ ದಂಡ ವಿಧಿಸಲಾಗಿದೆ.
ಆಲಹಳ್ಳಿ ಕೆರೆಗಳು ಮೇಲಕ್ಕೆ ತೇಲುತ್ತಿದ್ದು, ಕೊಳೆತ ತ್ಯಾಜ್ಯದಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಕಾಡಿತ್ತು. ಇದನ್ನು ಗಮನಿಸಿದ ಕೆರೆ ಚಳುವಳಿಗಾರರು ಬಿಬಿಎಂಪಿಗೆ ಮಾಹಿತಿ ನೀಡಿ ಹೀಗೆ ಮಾಡಿದವರು ಯಾರು ಎಂಬುದನ್ನು ತನಿಖೆ ನಡೆಸಿ ಎಂದು ಒತ್ತಾಯಿಸಿದ್ದರು.
ಕೆರೆಯಲ್ಲಿ ತ್ಯಾಜ್ಯಗಳನ್ನು ಎಸೆದ ಆಸ್ಪತ್ರೆಯಿಂದ ಬಿಬಿಎಂಪಿ 5 ಲಕ್ಷ ರೂ ದಂಡವನ್ನು ಸಂಗ್ರಹಿಸುತ್ತದೆ ಅನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಹೀಗಾಗಿರುವುದು ಇದು ಎರಡನೇ ಬಾರಿ. ಬಿಬಿಎಂಪಿ ಅಥವಾ ಬಿಡಿಎ ಎಲ್ಲಿಯವರೆಗೆ ಕೆರೆಯ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇದೇ ರೀತಿ ತ್ಯಾಜ್ಯಗಳನ್ನು ತಂದು ಹಾಕುತ್ತಾರೆ. ಇದರಿಂದ ಜನರ ಆರೋಗ್ಯ ಹಾಗೂ ಪರಿಸರ ಹಾಳಾಗುತ್ತದೆ ಎಂದು ಕಾರ್ಯಕರ್ತ ಆನಂದ್ ಯೆರ್ವಾದ್ ಹೇಳಿದ್ದಾರೆ.
