ಒಂದು ತಿಂಗಳವರೆಗೆ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನವು ಜು.12ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಮುಂಗಾರು ಅಧಿವೇಶನ ಜು.12ರಿಂದ ಪ್ರಾರಂಭವಾಗಿ ಆ.11ರಂದು ಮುಕ್ತಾಯಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ಸಂಸತ್ತಿನ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿ ಮುಂದಿಡಲಾಗಿದೆ.

ನವದೆಹಲಿ: ಒಂದು ತಿಂಗಳವರೆಗೆ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನವು ಜು.12ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

ಮುಂಗಾರು ಅಧಿವೇಶನ ಜು.12ರಿಂದ ಪ್ರಾರಂಭವಾಗಿ ಆ.11ರಂದು ಮುಕ್ತಾಯಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ಸಂಸತ್ತಿನ ವ್ಯವಹಾರಗಳ ಕ್ಯಾಬಿನೆಟ್‌ ಸಮಿತಿ ಮುಂದಿಡಲಾಗಿದೆ.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರ ನೇತೃತ್ವದ ಸಮಿತಿ ಜೂ.20ರಂದು ಅಧಿವೇಶನ ದಿನಾಂಕ ನಿಗದಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಒಮ್ಮತ ಅಭ್ಯರ್ಥಿಯ ಆಯ್ಕೆ ಸಂಬಂಧ ಬಿಜೆಪಿ ಎಲ್ಲಾ ಪಕ್ಷಗಳೊಂದಿಗೆ ‘ಪ್ರಜಾಪ್ರ ಭುತ್ವದ ಸ್ಫೂರ್ತಿ'ಯಿಂದ ಮಾತುಕತೆ ನಡೆಸಲಿದೆ ಎಲ್ಲಾ ಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮನವಿ ಮಾಡಿಕೊಂಡಿದ್ದಾರೆ.