ನವದೆಹಲಿ [ಆ.19]: ನಿಧಾನವಾಗಿ ಆರಂಭವಾದರೂ ಬಳಿಕ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಅಪ್ಪಳಿಸುತ್ತಿರುವ ಮುಂಗಾರು ಮಳೆ, ಇದುವರೆಗೆ ದೇಶದ ನಾನಾ ಭಾಗಗಳಲ್ಲಿ 1058 ಮಂದಿಯನ್ನು ಬಲಿ ಪಡೆದಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 245 ಮಂದಿ ಬಲಿಯಾಗಿದ್ದಾರೆ.

ಉಳಿದಂತೆ ಕೇರಳದಲ್ಲಿ 155, ಪಶ್ಚಿಮ ಬಂಗಾಳದಲ್ಲಿ 154, ಬಿಹಾರದಲ್ಲಿ  130, ಗುಜರಾತ್‌ನಲ್ಲಿ 107, ಅಸ್ಸಾಂ ಹಾಗೂ ಕರ್ನಾಟಕದಲ್ಲಿ ತಲಾ 94 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಮೌಲ್ಯಮಾಪನದಲ್ಲಿ ತಿಳಿದು ಬಂದಿದೆ. 

ಮಳೆಗೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಾಗಿ ಕ್ಲಿಕ್ಕಿಸಿ

ಇಲ್ಲಿಯವರೆಗೆ ರಾಜ್ಯ ಹಾಗೂ ಕೇಂದ್ರ ಸಂಸ್ಥೆಗಳು 18 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿವೆ.