ನವದೆಹಲಿ: ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಅವಧಿಯಲ್ಲಿ ಭಾರೀ ಮಳೆ ಸುರಿದು ಜಲಾಶಯಗಳೆಲ್ಲಾ ಉಕ್ಕಿ ಹರಿಯುತ್ತಿದ್ದರೂ, ಈಗಲೂ ಕರ್ನಾಟಕದ 16 ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ, ಈ ಪೈಕಿ 2 ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚಿನ ಕೊರತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಇನ್ನು ಇಡೀ ದಕ್ಷಿಣ ಭಾರ ತದ ಚಿತ್ರಣ ಗಮನಿಸಿದರೆ ಒಟ್ಟಾರೆ ಶೇ.40ರಷ್ಟು ಮಳೆ ಕೊರತೆ ಇದೆ. ದಕ್ಷಿಣ ಭಾರತದ 125 ರ ಪೈಕಿ 54 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. 

ತಮಿಳುನಾಡಿನ 32ರ ಪೈಕಿ 20 ಜಿಲ್ಲೆಗಳಲ್ಲಿ, ತೆಲಂಗಾಣದ ಆರು, ಆಂಧ್ರಪ್ರದೇಶದ 6 ಜಿಲ್ಲೆಗಳಲ್ಲಿ, ಪುದುಚೇರಿ ಯ ಎಲ್ಲ 4 ಜಿಲ್ಲೆಗಳಲ್ಲಿ ಮಳೆ ಕೊರತೆಯಿದೆ ಕೇರಳದ 10 ಜಿಲ್ಲೆಗಳಲ್ಲಿ ಹೆಚ್ಚುವರಿ ಮಳೆಯಾಗಿದ್ದರೆ, ಎರಡು ಜಿಲ್ಲೆಗಳಲ್ಲಿ ತೀವ್ರ ಹೆಚ್ಚಳವಾಗಿದೆ.