ಜಪಾನಿನ ಸೇಕ್ ಹೌಸ್ ಬಾರ್‌ನಲ್ಲಿ ಅತಿಥಿಗಳ ಸೇವೆಗೆ ಮಂಗನನ್ನು ಬಳಸಿಕೊಳ್ಳಲಾಗಿದೆ.

ಜಪಾನಿನಲ್ಲಿ ಮನುಷ್ಯರ ಕೆಲಸಗಳನ್ನು ರೊಬೋಟ್ ಇಲ್ಲವೇ ಯಂತ್ರಗಳು ಮಾಡುವುದನ್ನು ನೋಡಿದ್ದೇವೆ. ಆದರೆ, ಜಪಾನಿನ ಸೇಕ್ ಹೌಸ್ ಬಾರ್‌ನಲ್ಲಿ ಅತಿಥಿಗಳ ಸೇವೆಗೆ ಮಂಗನನ್ನು ಬಳಸಿಕೊಳ್ಳಲಾಗಿದೆ. ವೇಟರ್'ಗಳ ರೀತಿ ಉಡುಪುತೊಟ್ಟ ಮಕಾಕ್ಯು ಜಾತಿಯ ಮಂಗಗಳು ಗ್ರಾಹಕರಿಗೆ ಬಿಯರ್ ಬಾಟಲಿಗಳನ್ನು ತಂದು ಕೊಡುತ್ತವೆ. ಮಂಗಗಳಿಂದ ಸೇವೆ ಮಾಡಿಸಿಕೊಳ್ಳುವ ಸಲುವಾಗಿಯೇ ನಾಲ್ಕು ದಿಕ್ಕುಗಳಿಂದ ಜನರು ಈ ಬಾರ್‌ಗೆ ಬರುತ್ತಿದ್ದಾರಂತೆ.