ಗಣಿನಾಡು ಬಳ್ಳಾರಿಯಲ್ಲಿ ಮಂಗಗಳ ಹಾವಳಿ ಜಾಸ್ತಿಯಾಗಿದೆ. ಕಳೆದ ಒಂದು ವಾರದಿಂದ ಬೈಲೂರು ಗ್ರಾಮಕ್ಕೆ 10ಕ್ಕೂ ಹೆಚ್ಚು ಮಂಗಗಳ ಗುಂಪೊಂದು ಲಗ್ಗೆ ಇಟ್ಟಿದೆ. ಜಮೀನುಗಳ ಕೆಲಸ ಕಾರ್ಯಗಳಿಗೆ ಹೊಗಿದ್ದ ಸುಮಾರು 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ.

ಬಳ್ಳಾರಿ(ಜು.14): ಗಣಿನಾಡು ಬಳ್ಳಾರಿಯಲ್ಲಿ ಮಂಗಗಳ ಹಾವಳಿ ಜಾಸ್ತಿಯಾಗಿದೆ. ಕಳೆದ ಒಂದು ವಾರದಿಂದ ಬೈಲೂರು ಗ್ರಾಮಕ್ಕೆ 10ಕ್ಕೂ ಹೆಚ್ಚು ಮಂಗಗಳ ಗುಂಪೊಂದು ಲಗ್ಗೆ ಇಟ್ಟಿದೆ. ಜಮೀನುಗಳ ಕೆಲಸ ಕಾರ್ಯಗಳಿಗೆ ಹೊಗಿದ್ದ ಸುಮಾರು 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ.

ಮಹಿಳೆಯರು, ಮಕ್ಕಳು, ವಯೋವೃದ್ದರು ಮನೆಯಿಂದ ಹೊರ ಹೋಗಲು ಹೆದರುತ್ತಿದ್ದಾರೆ. ಮನೆಯಿಂದ ಹೊರಬರಬೇಕಾದರೆ ಕೈಯಲ್ಲಿ ಕಟ್ಟಿಗೆ, ದೊಣ್ಣೆ ಹಿಡಿದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ತಿರುಗಾಡುವ ಬೈಕ್ ಸವಾರರಂತು ಮಂಗಗಳ ಕಾಟಕ್ಕೆ ರೋಸಿ ಹೊಗಿದ್ದಾರೆ.

ಮಂಗನ ಕಾಟಕ್ಕೆ ತುತ್ತಾಗಿರುವ ಗ್ರಾಮಸ್ಥರು ಕೆಲವರು ಚಿಕಿತ್ಸೆ ಪಡೆದರೆ, ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕು ತಂದರೂ ಅಧಿಕಾರಿಗಳು ಭೇಟಿ ನೀಡಿ ಬರಿಗೈಯಲ್ಲಿ ವಾಪಸ್ ಹೊಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.