Asianet Suvarna News Asianet Suvarna News

ಸ್ವಿಸ್ ಬ್ಯಾಂಕ್'ನಲ್ಲಿ ಭಾರತೀಯರ ಖಾತೆ ಇಳಿಮುಖ: 88ನೇ ಸ್ಥಾನಕ್ಕೆ ಕುಸಿದ ಭಾರತ!

ಸ್ವಿಸ್​ ಬ್ಯಾಂಕ್​ ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ತೆರಿಗೆ ವಂಚಕರ ಸುರಕ್ಷಿತ ತಾಣ ಸ್ವಿಸ್​ ಬ್ಯಾಂಕ್. ಅಚ್ಚರಿ ಎಂದರೆ ಕಳೆದ ಮೂರು ವರ್ಷಗಳಿಂದ ಈ ಬ್ಯಾಂಕ್​ನಲ್ಲಿ  ಹಣ ತೊಡಗಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆಶ್ಚರ್ಯ  ಎನಿಸಿದರೂ ಇದು ಸತ್ಯ

Money in Swiss banks India slips to 88th place
  • Facebook
  • Twitter
  • Whatsapp

ನವದೆಹಲಿ(ಜು.03): ಸ್ವಿಸ್​ ಬ್ಯಾಂಕ್​ ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಭಾರತದ ತೆರಿಗೆ ವಂಚಕರ ಸುರಕ್ಷಿತ ತಾಣ ಸ್ವಿಸ್​ ಬ್ಯಾಂಕ್. ಅಚ್ಚರಿ ಎಂದರೆ ಕಳೆದ ಮೂರು ವರ್ಷಗಳಿಂದ ಈ ಬ್ಯಾಂಕ್​ನಲ್ಲಿ  ಹಣ ತೊಡಗಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆಶ್ಚರ್ಯ  ಎನಿಸಿದರೂ ಇದು ಸತ್ಯ

ಕಡಿಮೆಯಾಯ್ತು ಕಳ್ಳಾಟ! 

ಕಾಳಧನಿಕರ ಸ್ವರ್ಗ ಸ್ವಿಸ್​ ಬ್ಯಾಂಕ್​ಗಳಲ್ಲಿ ಭಾರತೀಯರು ಹಣ ಕೂಡಿಡುವ ಪ್ರಮಾಣ ಕಳೆದ ಮೂರು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಅಧಿಕಾರಕ್ಕೆ ಬಂದ ಕೂಡಲೇ ಸ್ವಿಸ್​ ಬ್ಯಾಂಕ್​ಗಳಲ್ಲಿರುವ ಕಪ್ಪುಕುಳಗಳ ಹೆಸರನ್ನು  ಬಹಿರಂಗಪಡಿಸೋದಾಗಿ ಹೇಳಿದ್ದರು. ಅದರಂತೆ ಕೆಲವರ ಹೆಸರುಗಳನ್ನು ಬಹಿರಂಗ ಪಡಿಸಿದ್ದರು. ಕಾಳಧನಿಕರ ವಿರುದ್ಧ ಮೋದಿ  ಚಾಟಿ ಬೀಸುತ್ತಿದ್ದಂತೆ,  ಇದೀಗ ಸ್ವಿಸ್​ ಬ್ಯಾಂಕ್​'ನಲ್ಲಿ ಭಾರತದ ಸ್ಥಾನ  88ಕ್ಕೆ ಕುಸಿದಿದೆ. ಬ್ರಿಟನ್​ ಅಗ್ರಸ್ಥಾನಕ್ಕೇರಿದೆ.

ಮೊನ್ನೆಯಷ್ಟೇ ಪ್ರಧಾನಿ ಮೋದಿ ಅವರು, ದೆಹಲಿಯಲ್ಲಿ ನಡೆದ ಇನ್ಸಿಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸ್​ ನ ಸಂಸ್ಥಾಪನಾ ದಿನದ ಸಮಾರಂಭದಲ್ಲಿ  ಸ್ವಿಸ್​​ ಬ್ಯಾಂಕ್​ನಲ್ಲಿ  ಭಾರತೀಯರು ಬಚ್ಚಿಡುತ್ತಿರುವ ಹಣದ ಪ್ರಮಾಣ  ಗಣನೀಯವಾಗಿ  ಇಳಿಮುಖ ಕಂಡಿದೆ ಎಂದು  ಹೇಳಿದ್ದರು. 

ಇನ್ನು  ಪ್ರಸ್ತುತ ಸ್ವಿಸ್​ ಬ್ಯಾಂಕ್ ಗಳಲ್ಲಿರುವ ಒಟ್ಟು ವಿದೇಶಿ ಹಣದ ಪೈಕಿ ಭಾರತೀಯರ ಹಣ ಶೇ0.04ಕ್ಕೆ  ಕುಸಿದಿದೆ ಎಂದು  ಸ್ವಿಸ್​ ನ್ಯಾಷನಲ್ ಬ್ಯಾಂಕ್ ಬಿಡುಗಡೆ  ಮಾಡಿದ 2016ರ  ಅಂತ್ಯದ ವರದಿ ತಿಳಿಸಿದೆ.

2015ರಲ್ಲಿ ಸ್ವಿಸ್​ ಬ್ಯಾಂಕ್​ಗಳಲ್ಲಿ  ಹಣ ಕೂಡಿಟ್ಟವರ ಪಟ್ಟಿಯಲ್ಲಿ  ಭಾರತ 75ನೇ ಸ್ಥಾನದಲ್ಲಿತ್ತು. ಅದಕ್ಕೂ ಮುಂಚೆ 61ನೇ ಸ್ಥಾನದಲ್ಲಿತ್ತು. 2007ರಲ್ಲಿ  ಭಾರತ ಟಾಪ್​ 50 ದೇಶಗಳ ಪಟ್ಟಿಯಲ್ಲಿತ್ತು. 2004ರಲ್ಲಿ  ಭಾರತ 37ನೇ ಸ್ಥಾನದಲ್ಲಿತ್ತು. ಹೀಗೆ  ವರ್ಷದಿಂದ ವರ್ಷಕ್ಕೆ ಕಾಳಧನಿಕ ಸಂಖ್ಯೆ ಕಡಿಮೆಯಾಗುತ್ತಿತ್ತು . ಕಪ್ಪು ಹಣದ ಪಿಡುಗನ್ನು  ಬೇರು ಸಮೇತ ಕಿತ್ತೊಗೆಯೋದಾಗಿ  ಪಣ ತೊಟ್ಟಿದ್ದ ಪ್ರಧಾನಿ ಮೋದಿ ಅವರ  ಕನಸು ನನಸಾಗುತ್ತಿದೆ ಎಂದರೆ ತಪ್ಪಾಗಲಾರದು.

Follow Us:
Download App:
  • android
  • ios