ಸಾವಿನಲ್ಲೂ ಒಂದಾದ ತಾಯಿ - ಮಗ

First Published 30, Jul 2018, 5:52 PM IST
Mom passed away the same day son end life
Highlights

  • ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದವನು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದ
  • ಮಗ ಮೃತಪಟ್ಟ ಕೆಲವೇ ಗಂಟೆಗಳಲ್ಲಿ ತಾಯಿಯು ಇಹಲೋಕ ತ್ಯಜಿಸಿದ್ದಾಳೆ

ಮೈಸೂರು[ಜು.30]: ಮಗನ ಸಾವಿನಿಂದ ಆಘಾತಕ್ಕೆ ಒಳಗಾದ ತಾಯಿ ಕುಳಿತಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿ ನಡೆದಿದೆ. ಅಗ್ರಹಾರದ ನಿವಾಸಿ 75 ವರ್ಷದ ಶಾಂತಾಮಣಿ ಮಗನ ಸಾವಿನ ದು:ಖದಲ್ಲಿ ಮೃತರಾಗಿದ್ದಾರೆ. ಈಕೆಯ ಮಗ 48 ವರ್ಷದ ದಿಲೀಪ್ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ದಿಲೀಪ್  ಗೂಡ್ಸ್ ವ್ಯಾನ್ ಚಾಲಕನಾಗಿದ್ದ. 

ತಾಯಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದವನು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ಶಾಂತಾಮಣಿಗೆ ಆಘಾತವನ್ನು ತಂದಿತ್ತು. ಕಿಡ್ನಿ ಸಮಸ್ಯೆಯಿಂದಾಗಿ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ಅವರು ಮಗನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಕುಳಿತಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇದರಿಂದಾಗಿ ತಾಯಿ ಹಾಗೂ ಮಗನ ಅಂತ್ಯಸಂಸ್ಕಾರವನ್ನು ಒಟ್ಟಿಗೆ ನಡೆಸಲು ತೀರ್ಮಾನಿಸಿರುವ ಸಂಬಂಧಿಗಳು ಸಂಜೆ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ.

loader