ಮೋಹನ್'ದಾಸ್ ಪೈ ಪುತ್ರ ಬೆಂಗಳೂರಿನ ಕೋರಮಂಗಲದಲ್ಲಿ 154 ಬ್ರೇಕ್ ಫಾಸ್ಟ್ ಕ್ಲಬ್ ಎಂಬ ಹೋಟೆಲ್ ಹೊಂದಿದ್ದು, ಅಲ್ಲಿ ಗೋಮಾಂಸದ ತಿನಿಸುಗಳು ಲಭ್ಯವಿದೆ ಎನ್ನಲಾಗಿದೆ. ವಿಚಾರವನ್ನು ಮುಂದಿಟ್ಟುಕೊಂಡು ನೆಟಿಜನ್’ಗಳು ಪೈಯವರ ಮೇಲೆ ಹರಿಹಾಯ್ದಿದ್ದಾರೆ.
ಬೆಂಗಳೂರು: ಖ್ಯಾತ ವಾಣಿಜ್ಯ ವ್ಯವಹಾರ ತಜ್ಞ ಹಾಗೂ ಇನ್ಫೋಸಿಸ್ ಮಾಜಿ ನಿರ್ದೇಶಕ ಟಿ.ವಿ. ಮೋಹನ್ ದಾಸ್ ಪೈ ಗೋಮಾಂಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಮೋಹನ್ ದಾಸ್ ಪೈ ಲಿಶಿಯಸ್ ಎಂಬ ಮಾಂಸ ಮಾರಾಟ ಕಂಪನಿಯ ಪಾಲುದಾರರಾಗಿದ್ದಾರೆನ್ನಲಾಗಿದೆ.
ಅವರ ಪುತ್ರ ಬೆಂಗಳೂರಿನ ಕೋರಮಂಗಲದಲ್ಲಿ 154 ಬ್ರೇಕ್ ಫಾಸ್ಟ್ ಕ್ಲಬ್ ಎಂಬ ಹೋಟೆಲ್ ಹೊಂದಿದ್ದು, ಅಲ್ಲಿ ಗೋಮಾಂಸದ ತಿನಿಸುಗಳು ಲಭ್ಯವಿದೆ ಎನ್ನಲಾಗಿದೆ.

ಆ ವಿಚಾರವನ್ನು ಮುಂದಿಟ್ಟುಕೊಂಡು ನೆಟಿಜನ್’ಗಳು ಪೈಯವರ ಮೇಲೆ ಹರಿಹಾಯ್ದಿದ್ದಾರೆ. ಒಂದು ಕಡೆ ಗೋಹತ್ಯೆ ಮೇಲೆ ನಿಷೇಧ ಹೇರಬೇಕೆನ್ನುವುದು,
ಇನ್ನೊಂದು ಕಡೆ ಕುಟುಂಬ ಸದಸ್ಯರುಗೋಮಾಂಸ ತಿನಿಸುಗಳನ್ನು ಮಾರುವುದು ಕಪಟತನವಲ್ಲವೇ ಎಂದು ಕೇಳಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿರುವ ಮೋಹನ್ ದಾಸ್ ಪೈ, ತಾನು ಅಕ್ರಮ ಗೋಹತ್ಯೆಯನ್ನು ಮಾತ್ರ ವಿರೋಧಿಸುವುದಾಗಿ ಹೇಳಿಕೊಂಡಿದ್ದಾರೆ.
ಆಹಾರವು ವ್ಯಕ್ತಿಯ ವೈಯುಕ್ತಿಕ ಆಯ್ಕೆಯಾಗಿದೆ ಎಂದಿರುವ ಮೋಹನ್ ದಾಸ್ ಪೈ, ತನ್ನ ಪುತ್ರ ಆ ಹೋಟೆಲ್’ನಲ್ಲಿ ಹೂಡಿಕೆದಾರ ಮಾತ್ರ, ಆತ ಅದನ್ನು ನಡೆಸುತ್ತಿಲ್ಲವೆಂದಿದ್ದಾರೆ.
