ಶಮಿ ಅವರು ಡಿಸೆಂಬರ್ 23 ರಂದು ತಮ್ಮ ಫೇಸ್'ಬುಕ್ ಪುಟದಲ್ಲಿ ತಮ್ಮ ಪತ್ನಿಯೊಂದಿಗೆ ಕುಳಿತಿರುವ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಚಿತ್ರದಲ್ಲಿ  ಶಮಿ ಪತ್ನಿ ಹಸೀನ್ ಜಹಾನ್ ಅವರು ಸ್ಲೀವ್ ಲೆಸ್ ಗೌನ್ ಧರಿಸಿದ್ದರು.

ಮುಂಬೈ(ಡಿ.26): ಭಾರತ ಕ್ರಿಕೆಟ್ ತಂಡದ ಖ್ಯಾತ ವೇಗದ ಬೌಲರ್ ಮೊಹಮದ್ ಶಮಿ ಪತ್ನಿ ಧರಿಸಿದ್ದ ಉಡುಪು ಸಂಪ್ರದಾಯಿ ಮುಸ್ಲಿಂಮರ ಕೆಂಗಣ್ಣಿಗೆ ಗುರಿಯಾಗಿದೆ.

ಶಮಿ ಅವರು ಡಿಸೆಂಬರ್ 23 ರಂದು ತಮ್ಮ ಫೇಸ್'ಬುಕ್ ಪುಟದಲ್ಲಿ ತಮ್ಮ ಪತ್ನಿಯೊಂದಿಗೆ ಕುಳಿತಿರುವ ಭಾವಚಿತ್ರವನ್ನು ಪೋಸ್ಟ್ ಮಾಡಿದ್ದರು. ಈ ಚಿತ್ರದಲ್ಲಿ ಶಮಿ ಪತ್ನಿ ಹಸೀನ್ ಜಹಾನ್ ಅವರು ಸ್ಲೀವ್ ಲೆಸ್ ಗೌನ್ ಧರಿಸಿದ್ದರು.

ಇದಕ್ಕೆ ಆಕ್ರೋಶಗೊಂಡ ಸಂಪ್ರದಾಯಿ ಮುಸ್ಲಿಮರು ಬುರ್ಖಾ ಧರಿಸದ ಹಸೀನ್ ಜಹಾನ್ ಅವರನ್ನು ನೀವು ಮುಸ್ಲಿ'ಮರೆ ಅಥವಾ ಬೇರೆ ಸಮುದಾಯದವರೆ. ನೀವು ಈ ರೀತಿ ಉಡುಪು ಧರಿಸಿ ಯಾವ ಸಮುದಾಯವನ್ನು ಪ್ರತಿನಿಧಿಸುತ್ತಿದ್ದೀರಿ' ಮುಂತಾದ ನಿಂದನಾಕಾರಿ ಹೇಳಿಕೆಗಳನ್ನು ಭಾವಚಿತ್ರಕ್ಕೆ ಪ್ರತಿಕ್ರಯಿಸಿ ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದ್ದರು.

ಹಲವರು ಬೆದರಿಕೆ ರೀತಿಯ ಹೇಳಿಕೆಗಳನ್ನು ಕೂಡ ಇದರಲ್ಲಿ ಇದ್ದವು. ಸಂಪ್ರದಾಯಿಗಳ ನಿಲುವಿಗೆ ಮೊಹಮದ್ ಕೈಫ್, ರವೀಂದ್ರ ಜಡೇಜಾ ಸೇರಿದಂತೆ ಹಲವು ಕ್ರಿಕೆಟಿಗರು, ಅಭಿಮಾನಿಗಳು ಟ್ವಿಟರ್'ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ವ್ಯಕ್ತಿ ಸ್ವಾತಂತ್ರಕ್ಕೆ ಧರ್ಮವನ್ನು ಬೆರಸಬೇಡಿ ಎಂದು ಕಿಡಿ ಕಾರಿದ್ದಾರೆ.

ಸ್ವತಃ ಶಮಿ ಕೂಡ ಸಂಪ್ರದಾಯಿಗಳ ನಿಲುವನ್ನು ಟ್ವಿಟರ್'ನಲ್ಲಿ ಖಂಡಿಸಿದ್ದು, ಇದು ನನ್ನ ಸ್ವಂತದ ವಿಷಯ, ಉನ್ನತ ಸಾಧನೆ ಮಾಡಿದ ಕೆಲವರಿಗೆ ಮಾತ್ರ ಇಂತಹ ಗೌರವ ಸಿಗುತ್ತದೆ. ನೀವು ನಮ್ಮನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಿರಿ ನನಗೇನು ಬೇಸರವಿಲ್ಲ' ಎಂದಿದ್ದಾರೆ.

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಉಡುಪಿನ ಬಗ್ಗೆಯೂ 2005ರಲ್ಲಿ ಸಂಪ್ರದಾಯಿಗಳು ಫತ್ವ ಹೊರಡಿಸಿದ್ದರು. ಆದರೆ ಸಾನಿಯಾ ಇದಕ್ಕೆ ಕೇರ್ ಮಾಡಿರಲಿಲ್ಲ.