2019ರ ಲೋಕಸಭಾ ಚುನಾವಣೆ : ಕ್ರಿಕೆಟಿಗ ಸ್ಪರ್ಧೆ

https://static.asianetnews.com/images/authors/b348a094-0bef-5801-a1f6-61e57071185f.jpg
First Published 16, Jul 2018, 11:16 AM IST
Mohammad Azharuddin to contest 2019 Loksabha poll
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ವಿವಿಧ ಪಕ್ಷಗಳಿಂದ ಸೆಲೆಬ್ರಿಟಿಗಳು ಸ್ಪರ್ಧೆ ಮಾಡುತ್ತಿದ್ದು, ಇದೀಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದ ಸಿಕಂದರಾಬಾದ್ ನಿಂದ ಕಣಕ್ಕಿಳಿಯಲು ಇಚ್ಛಿಸಿರುವೆ ಎಂದಿದ್ದಾರೆ.

ನವದೆಹಲಿ: ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದ ಸಿಕಂದರಾಬಾದ್ ನಿಂದ ಕಣಕ್ಕಿಳಿಯಲು ಇಚ್ಛಿಸಿರುವೆ ಎಂದಿದ್ದಾರೆ.

‘2009 ರಲ್ಲಿ ಉತ್ತರ ಪ್ರದೇಶ ಮೊರಾದಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ನಾನು 2014 ರಲ್ಲಿ ರಾಜಸ್ಥಾನದ  ಟೋಂಕ್-ಸವಾಯಿ ಮಧೋಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆದರೆ, ಅಲ್ಲಿ ಪರಾಭವಗೊಂಡಿದ್ದೆ. ಈ ಮೂಲಕ ನಾನು ಸುರಕ್ಷಿತ ಕ್ಷೇತ್ರಕ್ಕೆ ಅಂಟಿಕೊಳ್ಳುವವನಲ್ಲ ಎಂಬುದನ್ನು ನಿರೂಪಿಸಿದ್ದೇನೆ,’ ಎಂದು ಅಜರ್ ಇಲ್ಲಿ ಹೇಳಿದರು.

loader