ಮೀರತ್'ನ ಸಾರ್ದನಾ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು ಜೊತೆಗೆ 100 ಅಡಿ ಉದ್ದದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಲಖನೌ(ಅ.05): ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ 30 ಕೋಟಿ ವೆಚ್ಚದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇಗುಲ ನಿರ್ಮಾಣವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೀರತ್'ನ ಸಾರ್ದನಾ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು ಜೊತೆಗೆ 100 ಅಡಿ ಉದ್ದದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಕ್ಟೋಬರ್ 23 ರಂದು ಇದಕ್ಕಾಗಿ ಭೂಮಿ ಪೂಜೆ ನಡೆಯಲಿದ್ದು, ಬಿಜೆಪಿಯ ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

ಪ್ರಧಾನಿಯ ಬೆಂಬಲಿಗ ಹಾಗೂ ಅಭಿಮಾನಿಯೂ ಆದ ನಿವೃತ್ತ ಇಂಜಿನಿಯರ್ ಜೆ.ಪಿ. ಸಿಂಗ್ ಈ ಕಾರ್ಯಕ್ಕೆ ಮುಂದಾಗಿದ್ದು, ದೇಗುಲ ನಿರ್ಮಾಣವಾಗಲು 2 ವರ್ಷ ಸಮಯವಾಗಲಿದೆ ಎಂದಿರುವ ಅವರು, ನಾನು ಮೋದಿಯವರ ಅಭಿಮಾನಿಯಾಗಿದ್ದು, 2 ದಶಕಗಳಿಂದ ಅವರು ಕೈಗೊಂಡಿರುವ ಯೋಜನೆಗಳು ನನಗೆ ಇಷ್ಟವಾಗಿದೆ. ಸರ್ಕಾರಿ ಕೆಲಸದಲ್ಲಿದ್ದ ಕಾರಣ ಈ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ' ಎಂದು ತಿಳಿಸಿದ್ದಾರೆ.