ಗಾಂಧಿನಗರ-ಅಹ್ಮದಾಬಾದ್‌ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಮೀಪಿಸುತ್ತಿದ್ದಾಗ ಆ್ಯಂಬುಲೆನ್ಸ್‌ ಬರುವುದನ್ನು ಪ್ರಧಾನಿ ಗಮನಿಸಿದರು. ತಕ್ಷಣವೇ ಭದ್ರತಾ ನಿಯಮಗಳನ್ನು ಮುರಿದು, ತಮ್ಮ ಬೆಂಗಾವಲು ವಾಹನಗಳನ್ನು ಬದಿಗೆ ಸರಿದು ನಿಲ್ಲುವಂತೆ ಪ್ರಧಾನಿ ಸೂಚಿಸಿದರು.
ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್ನ 52ನೇ ವಾರ್ಷಿಕ ಸಭೆಯ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಗಾಂಧಿನಗರದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಗಾಂಧಿನಗರ-ಅಹ್ಮದಾಬಾದ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ, ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಮೀಪಿಸುತ್ತಿದ್ದಾಗ ಆ್ಯಂಬುಲೆನ್ಸ್ ಬರುವುದನ್ನು ಪ್ರಧಾನಿ ಗಮನಿಸಿದರು. ತಕ್ಷಣವೇ ಭದ್ರತಾ ನಿಯಮಗಳನ್ನು ಮುರಿದು, ತಮ್ಮ ಬೆಂಗಾವಲು ವಾಹನಗಳನ್ನು ಬದಿಗೆ ಸರಿದು ನಿಲ್ಲುವಂತೆ ಪ್ರಧಾನಿ ಸೂಚಿಸಿದರು.
ಆ್ಯಂಬುಲೆನ್ಸ್ ಸಾಗಲು ಅವಕಾಶ ಮಾಡಿಕೊಟ್ಟರು. ಕಳೆದ ತಿಂಗಳಷ್ಟೇ ವಿಐಪಿ ವಾಹನಗಳ ಮೇಲಿನ ಕೆಂಪು ದೀಪಗಳನ್ನು ತೆಗೆಯುವ ನಿರ್ಧಾರ ಕೈಗೊಂಡಿದ್ದ ಪ್ರಧಾನಿ, ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದು ಪ್ರತಿಪಾದಿಸಿದ್ದರು.
(ಚಿತ್ರಕೃಪೆ: ದೇಶ್ ಗುಜರಾತ್)
