ಭಾರತಕ್ಕೆ ಸ್ವಾತಂತ್ರ್ಯ ಬಂದು, 70 ವರ್ಷಗಳೇ ಆಗ್ತಾ ಇದೆ. ಆದ್ರೆ ಭ್ರಷ್ಟಾಚಾರ ಮಾತ್ರ ಕಡಿಮೆ ಆಗಿರಲಿಲ್ಲ.. ಆದ್ರೆ ಭ್ರಷ್ಟರ ನಿದ್ದೆಗೆಡಿಸೋದಕ್ಕೆ ಅಂತಾನೇ ಕಾಳಧನಿಕರ ಕಳ್ಳ ಖಜಾನೆಯನ್ನು ಬಗೆದು ತರೋದಕ್ಕೆ ಅಂತಾನೇ, ಓರ್ವ ಗಟ್ಟಿ ಗುಂಡಿಗೆಯ ವ್ಯಕ್ತಿ, ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರೇ ಪ್ರಧಾನಿ ನರೇಂದ್ರ ಮೋದಿ.
ಮೇರೆ ಪ್ಯಾರೇ ದೇಶವಾಸಿಯೋ.. ಈ ಪದ ಕೇಳಿದ್ರೆ ಸಾಕು.. ಕಾಳದನಿಕರು ಬೆಚ್ಚಿ ಬೀಳ್ತಾರೆ. ನಿದ್ದೆಯಲ್ಲಿದ್ದರೂ ದಿಢೀರನೆ ಎದ್ದು ಕೂರ್ತಾರೆ. ಯಾಕಂದ್ರೆ, ನವೆಂಬರ್ ಎಂಟರಂದು ಮೋದಿ ಮಾಡಿದ ಭಾಷಣ ಮತ್ತು ಹೊರ ಹಾಕಿದ ನೋಟ್ ಬ್ಯಾನ್ ನಿಯಮ, ಕಾಳಧನಿಕರನ್ನ ಇವತ್ತಿಗೂ ಕಾಡ್ತಾ ಇದೆ. ಡಿಸೆಂಬರ್ 30 ಇನ್ನೇನು ಹತ್ರ ಬರ್ತಾ ಇದೆ. ಡಿಸೆಂಬರ್ 31 ರಿಂದ ಹಳೆ ನೋಟ್ಗಳು ಅಕ್ಷರಶಃ ರದ್ದಿಯಾಗುತ್ತೆ. ಇದಾದ್ಮೇಲೆ ಮೋದಿ ಸೈಲೆಂಟಾಗಿರ್ತಾರಾ? ಖಂಡಿತ ಇಲ್ಲ.. ಡಿಸೆಂಬರ್ 30ರ ಪ್ಲಾನ್ ಆಲ್ರೆಡಿ ರೆಡಿ ಆಗಿದೆ. ಆ ಪ್ಲಾನ್ಗಳನ್ನ ಜಾರಿಗೆ ತಂದಿದ್ದೇ ಆದ್ರೆ, ಬರೀ ಭಾರತ ಮಾತ್ರವಲ್ಲ.. ವಿದೇಶಗಳಲ್ಲಿರೋ ಕಾಳಧನಿಕರೂ ಬೆಚ್ಚಿ ಬೀಳಲಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಕೂತ್ಕೊಂಡು ಟೇಬಲ್ ಕೆಳಗೆ ಕೈ ಚಾಚಿ ಲಂಚ ಇಸ್ಕೊಳ್ಳೋ ಭ್ರಷ್ಟರಿಗೂ, ಕಂಟಕ ಕಾಡಲಿದೆ ಅಷ್ಟಕ್ಕೂ ಮೋದಿ ಮಾಡ್ಕೊಂಡಿರೋ ಆ ಪ್ಲಾನ್ಗಳೇನು? ಭಾರತದಲ್ಲಿ ಅವುಗಳು ಜಾರಿಯಾದ್ರೆ, ವಿದೇಶಗಳಲ್ಲೂ ಅದು ಸದ್ದು ಮಾಡಲಿದೆಯಾ? ಡಿಸೆಂಬರ್ ನಂತರ, ಭಾರತದಲ್ಲಿ ಏನಾಗಲಿದೆ? ಈ ವರದಿ ನೋಡಿ.
ಭಾರತಕ್ಕೆ ಸ್ವಾತಂತ್ರ್ಯ ಬಂದು, 70 ವರ್ಷಗಳೇ ಆಗ್ತಾ ಇದೆ. ಆದ್ರೆ ಭ್ರಷ್ಟಾಚಾರ ಮಾತ್ರ ಕಡಿಮೆ ಆಗಿರಲಿಲ್ಲ.. ಆದ್ರೆ ಭ್ರಷ್ಟರ ನಿದ್ದೆಗೆಡಿಸೋದಕ್ಕೆ ಅಂತಾನೇ ಕಾಳಧನಿಕರ ಕಳ್ಳ ಖಜಾನೆಯನ್ನು ಬಗೆದು ತರೋದಕ್ಕೆ ಅಂತಾನೇ, ಓರ್ವ ಗಟ್ಟಿ ಗುಂಡಿಗೆಯ ವ್ಯಕ್ತಿ, ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರೇ ಪ್ರಧಾನಿ ನರೇಂದ್ರ ಮೋದಿ.
ಭ್ರಷ್ಟರ ವಿರುದ್ಧ ನೋಟ್ಬ್ಯಾನ್ ಅಸ್ತ್ರ! : ಡಿ.30ರವರೆಗೆ ನೋಟ್ಗಳ ಬದಲಾವಣೆ
ಸಾವಿರ ಮತ್ತು ಐನೂರು ರೂಪಾಯಿಗಳ ನೋಟ್ಗಳನ್ನು ಬ್ಯಾಂಕ್ಗೆ ಜಮೆ ಮಾಡಿ ಅದನ್ನು ಬದಲಾಯಿಸಿಕೊಳ್ಳಿ ಅದಕ್ಕೆ ಡಿಸೆಂಬರ್ 30 ರವೆರೆಗೆ ಗಡುವು ನೀಡಿದ್ರು. ಮೇರೆ ಪ್ಯಾರೇ ದೇಶವಾಸಿಯೋ.. ಡಿಸೆಂಬರ್ 30 ರವರೆಗೆ ಕಷ್ಟ ಆಗುತ್ತೆ.. ನನಗೋಸ್ಕರ ತಡ್ಕೊಳ್ಳಿ.. ಆಮೇಲೆ ಇಡೀ ದೇಶವೇ ಬದಲಾಗಿಬಿಡುತ್ತೆ ಅಂತೆಲ್ಲಾ, ಅಚ್ಚೇ ದಿನಗಳ ಕನಸು ತುಂಬಿದ್ರು ಮೋದಿ.. ಮೋದಿ ಹೇಳಿದ್ದ ಡಿಸೆಂಬರ್ 30 ಇನ್ನೇನು ಬಂದೇ ಬಿಟ್ತು.. 30 ರ ನಂತರ ಮುಂದೇನು ಅನ್ನೋ ಚಿಂತೆ ಈಗ ಎಲ್ಲರನ್ನ ಕಾಡ್ತಾ ಇದೆ.
ಕಾಳಧನಿಕರಿಗೆ ಶುರುವಾಗಿದೆ ನಡುಕ : ನಿದ್ದೆಯಲ್ಲೂ ಬೆಚ್ಚಿ ಬೀಳ್ತಿದ್ದಾರೆ ಭ್ರಷ್ಟರು!
ನರೇಂದ್ರ ಮೋದಿ.. ದೇಶದ ಭವಿಷ್ಯವನ್ನೇ ಬದಲಾಯಿಸೋದಕ್ಕೆ ನಿಂತಿರೋ ನೇತಾರ.. ನೋಟ್ ಬ್ಯಾನ್ ಮೂಲಕ ಇಡೀ ಜಗತ್ತಿನಾದ್ಯಂತ ಸದ್ದು ಮಾಡಿದ್ರು ಮೋದಿ.. ಡಿಸೆಂಬರ್ 30 ರವರೆಗೆ ಕಾಯಿರಿ ಅನ್ನೋ ಮೂಲಕ, ಕ್ಯೂರಿಯಾಸಿಟಿಯನ್ನ ಹುಟ್ಟು ಹಾಕಿದ್ರು. ಅದರಂತೆ ಡಿಸೆಂಬರ್ 30 ಹತ್ರ ಬಂದಿದೆ. 30 ರ ನಂತರ ಏನಾಗಬಹುದು ಅನ್ನೋ ಆಲೋಚನೆ ಅದಾಗಲೇ ಜನಸಾಮಾನ್ಯರಲ್ಲಿ ಶುರುವಾಗಿದೆ. ಅದರಲ್ಲೂ ಕಾಳಧನಿಕರಂತೂ, ನಿದ್ದೆಯಲ್ಲೂ ಬೆಚ್ಚಿ ಬೀಳ್ತಿದ್ದಾರೆ. 30ರ ನಂತರ ಮೋದಿ ಇನ್ಯಾವ ಕಾನೂನು ಜಾರಿಗೆ ತರ್ತಾರೋ. ಮೇರೆ ಪ್ಯಾರೇ ದೇಶವಾಸಿಯೋ ಅಂತ್ಹೇಳಿ, ಇನ್ನೆಂಥಾ ಬಲವಾದ ಹೊಡೆತ ನೀಡ್ತಾರೋ ಅಂತ ನಡುಗ್ತಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಭ್ರಷ್ಟರ ಎದೆಯಲ್ಲಿ ಈ ಪರಿಯ ನಡುಕ ಹುಟ್ಟಿಸಿದ ಮೊಟ್ಟ ಮೊದಲ ದಿಟ್ಟ ಆಲೋಚನೆಯ ಪ್ರಧಾನಿ ಅಂದ್ರರೆ, ಈ ನರೇಂದ್ರ ಮೋದಿ..
ಡಿಸೆಂಬರ್ 30ರ ನಂತರದ ಪ್ಲಾನ್ಗಳು!: ಆ ಪ್ಲಾನ್ಗಳು ಜಾರಿಯಾದ್ರೆ ನಡುಗಲಿದೆ ಜಗತ್ತು!
ನವೆಂಬರ್ 8ನೇ ತಾರೀಕಿನಿಂದ ನೋಟ್ ಬ್ಯಾನ್ ಬಿಸಿ ತಾರಕಕ್ಕೇರಿತ್ತು. ಆ ಬಿಸಿಯನ್ನೇ ಜನರಿಗೆ ಅರಗಿಸಿಕೊಳ್ಳೋದಕ್ಕೆ ಆಗ್ತಾ ಇಲ್ಲ. ಇವತ್ತಿಗೂ ಎಟಿಎಂ ಸಮಸ್ಯೆಗಳು ಕಡಿಮೆಯಾಗಿಲ್ಲ.. ಬೇಕಾದಷ್ಟು ಹಣ ಕೈಗೆ ಸಿಗ್ತಿಲ್ಲ.. ಬ್ಯಾಂಕ್ನಲ್ಲಿನ ಹಣದ ಕೊರತೆ ನೀಗಿಲ್ಲ.. ಜನ ಕ್ಯೂ ನಿಲ್ಲೋದು ತಪ್ತಿಲ್ಲ.. 50 ದಿನ ತಡ್ಕೊಳ್ಳಿ.. ಡಿಸೆಂಬರ್ 30 ರವೆರೆಗೆ ಎಲ್ಲವನ್ನೂ ಸಹಿಸಿಕೊಳ್ಳಿ ಅಂತ ಹೇಳಿದ್ರು ಮೋದಿ.. ಮೋದಿ ಹೇಳಿದಂತೆ ಡಿಸೆಂಬರ್ 30 ಹತ್ರ ಬರ್ತಾ ಇದೆ. ಇನ್ನೇನು ಎಲ್ಲಾ ಸಮಸ್ಯೆಗಳು ಬಗೆಹರೀಬಹುದು.. ಎಲ್ಲವೂ ಮೊದಲಿನಂತೆ ನಾರ್ಮಲ್ ಆಗಬಹುದು ಅಂತ ಎಲ್ರೂ ಅಂದುಕೊಂಡಿದ್ರು.. ಆದ್ರೆ ಮೋದಿ ಌಂಡ್ ಟೀಂ ಸಜ್ಜುಗೊಳಿಸಿರೋ ಡಿಸೆಂಬರ್ ಪ್ಲಾನ್ ಎಲ್ಲವನ್ನೂ ಉಲ್ಟಾ ಮಾಡಲಿದೆ. ಕಾಳಧನಿಕರ ವಿರುದ್ಧದ ಸಮರ ಮತ್ತಷ್ಟು ಕಠಿಣವಾಗೋ ಸಾಧ್ಯತೆ ಇದೆ. ಬಡವರಿಗೆ, ಪ್ರಾಮಾಣಿಕರಿಗೆ ಅಷ್ಟೇನೂ ಸಮಸ್ಯೆ ಆಗಲ್ಲ.. ಆದ್ರೆ ಭ್ರಷ್ಟರು ಬರ್ಬಾದ್ ಆಗೋದು ಗ್ಯಾರಂಟಿ. ಅದರಲ್ಲೂ ಡಿಸೆಂಬರ್ 30 ಪ್ಲಾನ್ಗಳು ಜಾರಿಯಾದ್ರೆ, ಬರೀ ಭಾರತದ ಮಾತ್ರವಲ್ಲ.. ಇಡೀ ಜಗತ್ತೇ ಗಡ ಗಡ ಅಂತ ನಡುಗಲಿದೆ.
ಭಾರತದಲ್ಲಿರೋ ಬೇನಾಮಿ ಆಸ್ತಿಗಳ ಮೇಲೆ ಕಣ್ಣು!: ವಿದೇಶದಲ್ಲಿರೋ ಅಕ್ರಮ ಆಸ್ತಿಗಳ ಮೇಲೆ ಹದ್ದಿನ ಕಣ್ಣು!
ಭ್ರಷ್ಟರ ಯಾವ ಬಿಲದಲ್ಲಿ ಹೊಕ್ಕರೂ ಬಿಡೋದಿಲ್ಲ. ಅವ್ರನ್ನ ಬಗ್ಗು ಬಡೀತೀನಿ ಅನ್ನೋ ದಿಟ್ಟ ನಿರ್ಧಾರದಲ್ಲಿದ್ದಾರೆ ಪ್ರಧಾನಿ ಮೋದಿ. ಆಲ್ರೆಡಿ ಸಾಕಷ್ಟು ಪ್ಲಾನ್ಗಳನ್ನ ಸಿದ್ಧವಾಗಿ ಇಟ್ಟುಕೊಂಡಿರೋ ಪ್ರಧಾನಿ, ಒಂದೊಂದೇ ನಿಯಮಗಳನ್ನ ಜಾರಿಗೊಳಿಸ್ತಾ ಇದ್ದಾರೆ. ಇದರ ಮೊದಲ ಹೆಜ್ಜೆ ಎನ್ನುವಂತೆ ನವೆಂಬರ್ 8 ರಂದು, ಸಾವಿರ ಐನೂರು ರೂಪಾಯಿಗಳ ಹಳೇ ನೋಟ್ಗಳನ್ನ ಬ್ಯಾನ್ ಮಾಡಿದ್ರು. ಇದರ ನಂತರ ಬೇನಾಮಿ ಆಸ್ತಿ ಹೊಂದಿದವರ ವಿರುದ್ಧ ಸಮರ ಸಾರಿದ್ರು ಮೋದಿ.
ಬೇನಾಮಿ ಆಸ್ತಿ ಹೊಂದಿರೋ ಸಾಕಷ್ಟು ಮಂದಿಯ ಲಿಸ್ಟ್ ಮಾಡಲಾಗಿದೆ. ಅವರ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನ ಕಲೆ ಹಾಕಲಾಗ್ತಿದೆ. ಆದ್ರೆ ಸಡನ್ನಾಗಿ ಕಠಿಣ ಕ್ರಮಕ್ಕೆ ಮುಂದಾಗ್ತಿಲ್ಲ ಮೋದಿ. ಡಿಸೆಂಬರ್ 30 ರ ನಂತರ, ನೋಟ್ ಬ್ಯಾನ್ ತಲೆ ಬಿಸಿ ಕಡಿಮೆಯಾಗ್ತಿದ್ದಂತೆ, ಬೇನಾಮಿ ಆಸ್ತಿ ವಿರುದ್ಧದ ಸಮರ ತುಂಬಾನೇ ಜೋರಾಗಿ ನಡೆಯಲಿದೆ. ಆಗ ಸಾಲು ಸಾಲು ಕಾಳಧನಿಕರು ತಗಲಾಕೊಳ್ತಾರೆ.
ಅಲ್ಲಿನ ಬೇನಾಮಿ ಆಸ್ತಿ ಮುಟ್ಟುಗೋಲು ಬಗ್ಗೆಯೂ ಚರ್ಚೆ?
ಮೋದಿ ದೇಶ ವಿದೇಶಗಳನ್ನು ಸುತ್ತಿ, ನಮ್ಮ ಹಣ ವೇಸ್ಟ್ ಮಾಡ್ತಿದ್ದಾರೆ. ಇವ್ರು ಭಾರತದ ಪ್ರಧಾನಿ ಅಲ್ವೇ ಅಲ್ಲ. ವಿದೇಶಗಳನ್ನು ಸುತ್ತಾಡೋ ಫಾರಿನ್ ಪ್ರಧಾನಿ ಅಂತೆಲ್ಲಾ ಕೆಲವರು ಮೋದಿ ವಿರುದ್ಧ ಹರಿಹಾಯ್ದಿದ್ರು.. ಆದ್ರೆ ಮೋದಿ ಅದ್ಯಾವುದರ ಬಗ್ಗೆನೂ ತಲೆ ಕೆಡಿಸಿಕೊಂಡಿರಲಿಲ್ಲ.. ಯಾಕಂದ್ರೆ, ಮೋದಿಯವರ ಮೈಂಡಲ್ಲಿ ಇದ್ದದ್ದು ಒಂದೇ ವಿಚಾರ. ಒಂದೇ ಗುರಿ. ಆ ಗುರಿ ಮುಟ್ಟಬೇಕು ಅಂದ್ರೆ, ವಿದೇಶಗಳ ಜೊತೆಗಿನ ಬಾಂಧವ್ಯ ವೃದ್ಧಿಸಿಕೊಳ್ಳಬೇಕು. ಹೀಗಾಗಿ ಜಗತ್ತಿನ ನಾನಾ ದೇಶಗಳನ್ನು ಸುತ್ತಾಡಿದ ಮೋದಿ, ಎಲ್ಲಾ ದೇಶಗಳ ಜೊತೆ ಉತ್ತಮ ಬಾಂದವ್ಯವವ ನ್ನ ವೃದ್ಧಿಸಿಕೊಂಡಿದ್ರು.
ಈಗ ಮೋದಿ ಮಾತಿಗೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಬೆಲೆ ಇದೆ. ಯಾಱರು ಅಕ್ರಮವಾಗಿ ಆಸ್ತಿ ಸಂಪಾದಿಸಿ, ವಿದೇಶಗಳಲ್ಲಿ ಹೂಡಿಕೆ ಮಾಡಿದ್ದಾರೋ.. ಬೇನಾಮಿ ಹೆಸರಲ್ಲಿ ವ್ಯವಹಾರ ನಡೆಸ್ತಿದ್ದಾರೋ ಅವ್ರ ವಿರುದ್ಧ ಮೋದಿ ಸರ್ಕಾರ ಕಠಿಣ ಕ್ರಮ ಜರುಗಿಸುವ ಸಾಧ್ಯತೆ ಇದೆ.
ಅಕ್ರಮ ಆಸ್ತಿ ಯಾವ ದೇಶದಲ್ಲಿಯೋ, ಆಯಾ ದೇಶಗಳ ಜೊತೆ ಒಪ್ಪಂದದ ಮಾತುಕಥೆ ನಡೆಸಿ, ಅಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಹೀಗೇನಾದ್ರೂ ಆದ್ರೆ, ಜಗತ್ತಿನ ಯಾವ ಮೂಲೆಯಲ್ಲಿ ಅಕ್ರಮ ಆಸ್ತಿ ಸಂಪಾದಿಸಿಟ್ಟರೂ, ಅದನ್ನ ಉಳಿಸಿಕೊಳ್ಳೋದಕ್ಕೆ ಸಾಧ್ಯವೇ ಆಗಲ್ಲ.. ಮೋದಿ ಡಿಸೆಂಬರ್ ನಂತರ ಇಂಥದ್ದೊಂದು ಕಠಿಣ ನಿಲುವು ಕೈಗೊಳ್ಳೋ ಸಾಧ್ಯತೆ ಇರೋದ್ರಿಂದ, ಕಾಳಧನಿಕರು ಬೆಚ್ಚಿ ಬಿದ್ದಿದ್ದಾರೆ.
ಡಿಸೆಂಬರ್ 30ರ ನಂತರ, ಭಾರತ ಬದಲಾಗಲಿದೆ. ಭವ್ಯಭಾರತದ ಉದಯವಾಗಲಿದೆ. ಭ್ರಷ್ಟರ ಆಟಕ್ಕೆ ಬ್ರೇಕ್ ಬೀಳಲಿದೆ.
ಆಲ್ರೆಡಿ ಭಾರತ ಡಿಜಿಟಲ್ ವ್ಯವಹಾರದತ್ತ ಸಾಗ್ತಾ ಇದೆ. ಕ್ಯಾಶ್ ಇಲ್ಲದೇ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಹೀಗೆ ನಾನಾ ಬಗೆಯ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ವ್ಯವಹರಿಸ್ತಿದ್ದಾರೆ ಜನ. ಡಿಸೆಂಬರ್ 30ರ ನಂತರ, ಡಿಜಿಟಲ್ ವ್ಯಾಪಾರಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದ್ದು, ಪ್ರತಿಯೊಂದು ವ್ಯವಹಾರವೂ ಚೆಕ್ ಅಥವ ಆನ್ಲೈನ್ ಮೂಲಕವೇ ನಡೆಯಲಿದೆ. ಹೀಗಾದಾಗ, ಆದಾಯ ತೆರಿಗೆ ಇಲಾಖೆಗೆ ಪಕ್ಕಾ ಲೆಕ್ಕ ಸಿಗುತ್ತೆ.. ಸರ್ಕಾರವನ್ನು ವಂಚಿಸ್ತಿದ್ದ ಖದೀಮರ ಆಟಕ್ಕೆ ಬ್ರೇಕ್ ಬೀಳಲಿದೆ.
ಅಲುಗಾಡಲಿದೆ ರಾಜಕೀಯ ಪಕ್ಷಗಳ ಬುಡ : ಚೆಕ್, ಆನ್ಲೈನ್ ಮೂಲಕವೇ ದೇಣಿಗೆ ಸಂಗ್ರಹ
ಇನ್ನು ಇದುವರೆಗೂ ರಾಜಕೀಯ ಪಕ್ಷಗಳಿಗೆ ಬರ್ತಾ ಇದ್ದ ದೇಣಿಗೆಗೆ ಸಂಬಂದಿಸಿದಂತೆ, ಯಾವುದೇ ದಾಖಲೆಗಳು, ಮಾಹಿತಿಗಳು ಇರ್ತಾ ಇರಲಿಲ್ಲ. ಆದ್ರೆ, ಇನ್ಮುಂದೆ ಚೆಕ್ ಅಥವ ಡಿಜಿಟಲ್ ವ್ಯವಹಾರದ ಮೂಲಕವೇ ದೇಣಿಗೆ ನೀಡಬೇಕು. ಒಂದು ವೇಳೆ ನಿಯಮ ಮೀರಿ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದ್ದೇ ಆದರೆ, ಅಂಥಾ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮ ಜರುಗಿಸೋ ಸಾಧ್ಯತೆ ಇದೆ.
ಬ್ಯಾಂಕ್ ಲಾಕರ್ಗಳ ಮೇಲೆ ಮೋದಿ ಕಣ್ಣು : ಲಾಕ್ ಓಪನ್ ಮಾಡಲು ಪರ್ಮಿಷನ್ ಬೇಕು?: ಮಾಹಿತಿ ಇಲ್ಲದಿದ್ರೆ ಲಾಕರ್ ಆಗುತ್ತೆ ಲಾಕ್!
ಚಿನ್ನ ಮತ್ತು ಮಹತ್ವದ ದಾಖಲೆ ಪತ್ರಗಳನ್ನ ಸಾಮಾನ್ಯವಾಗಿ ಬ್ಯಾಂಕ್ ಲಾಕರ್ಗಳಲ್ಲಿ ಇಡಲಾಗುತ್ತೆ. ಆದ್ರೆ ಮೋದಿ ಕಣ್ಣು ಲಾಕರ್ಗಳ ಮೇಲೂ ಬಿದ್ದಿದೆ. ಮುಂದಿನ ದಿನಗಳಲ್ಲಿ ಲಾಕರ್ ಓಪನ್ ಮಾಡ್ಬೆಕು ಅಂದ್ರೂ, ಆದಾಯ ತೆರಿಗೆ ಇಲಾಖೆಯ ಪರ್ಮಿಷನ್ ಬೇಕಾಗಬಹುದು. ಅಧಿಕಾರಿಗಳು ಲಾಕರ್ನಲ್ಲಿರೋ ದಾಖಲೆಗಳು ಮತ್ತು ಇತರೆ ವಸ್ತುಗಳನ್ನು ಪರಿಶೀಲಿಸೋ ಸಾಧ್ಯತೆ ಇದೆ. ಒಂದು ವೇಳೆ ಲಾಕರ್ನಲ್ಲಿಿರೋ ದಾಖಲೆಗಳು ನಿಮ್ಮ ಅಕ್ರಮ ಸಂಪಾದನೆಯ ಬಗ್ಗೆ ಒತ್ತಿ ಹೇಳ್ತಾ ಇದ್ರೆ, ನೀವು ಅಲ್ಲೇ ಲಾಕ್ ಆಗಿ ಬಿಡ್ತೀರ. ನಿಮ್ಮ ಲಾಕರ್ ಅನ್ನ ಸೀಜ್ ಮಾಡೋ ಸಾದ್ಯತೆ ಇದೆ. ಅಷ್ಟೇ ಅಲ್ಲ, ಕೇಸು ದಾಖಲಿಸಿ ಜೈಲಿಗೂ ಅಟ್ಟಬಹುದು.
ಡಿಜಿಟಲ್ ವ್ಯಾಪಾರಕ್ಕೆ ಉತ್ತೇಜನ..!: ಕಣ್ಮರೆಯಾಗುತ್ತಾ 2000ದ ನೋಟ್?
ಸದ್ಯದ ಪರಿಸ್ತಿತಿಯನ್ನ ನಿವಾರಿಸೋದಕ್ಕೆ, ಕೇಂದ್ರ ಸರ್ಕಾರ 2000 ಮುಖಬೆಲೆಯ ಹೊಸ ನೋಟ್ಗಳನ್ನ ಜಾರಿಗೆ ತಂದಿದೆ. ಇದರ ನಡುವಲ್ಲೇ ಡಿಜಿಟಲ್ ವ್ಯವಹಾರದ ಕಡೆಗೆ ಮುಖ ಮಾಡಿ ಅಂತ, ಕೇಂದ್ರ ಸರ್ಕಾರ ಒತ್ತಿ ಹೇಳ್ತಾ ಇದೆ. ಡಿಜಿಟಲ್ ವ್ಯವಹಾರದಲ್ಲಿ ಗಣನೀಯ ಸುಧಾರಣೆ ಆಗಿದ್ದೇ ಆದರೆ ಮತ್ತು ಡಿಜಿಟಲ್ ವ್ಯವಹಾರ ಮಾಡುವ ಜನರ ಪ್ರಮಾಣದಲ್ಲಿ ಏರಿಕೆ ಆಗಿದ್ದೇ ಆದ್ರೆ, ಮುಂದೊಂದು ದಿನ ನಿಧಾನವಾಗಿ 2000 ಮುಖಬೆಲೆಯ ನೋಟ್ಗಳು ಕಣ್ಮರೆಯಾಗೋ ಸಾಧ್ಯತೆ ಇದೆ.
ಮೋದಿ ಬತ್ತಳಿಕೆಯಲ್ಲಿ ಮತ್ತೊಂದು ಬ್ರಹ್ಮಾಸ್ತ್ರ!: ಸರ್ಕಾರಿ ಕಚೇರಿಯಲ್ಲಿರೋ ಭ್ರಷ್ಟರಿಗೂ ಬರೆ :ಸರ್ಕಾರಿ ಕಚೇರಿಯಲ್ಲಿ ಸಿಸಿಟಿವಿ ಅಳವಡಿಕೆ! ಟೇಬಲ್ ಕೆಳಗಿನ ವ್ಯವಹಾರಗಳು ಬಂದ್..!
ಭಾರತದ ಯಾವ ಸರ್ಕಾರಿ ಕಚೇರಿಗೆ ಹೋದ್ರೂ, ಅಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಲಂಚ ಇಲ್ದೇ ಮಂಚಾನೇ ಹತ್ತಲ್ಲ ಅನ್ನೋ ಮಟ್ಟಕ್ಕೆ, ಕೆಲ ಸರ್ಕಾರಿ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಟೇಬಲ್ ಕೆಳಗೆ ದುಡ್ಡು ಕೊಡಲೇ ಬೇಕು.. ಇಲ್ಲವಾದ್ರೆ, ಎಲ್ಲಾ ಸರಿ ಇದ್ರೂ ನಿಮ್ಮ ಕೆಲಸ ಆಗೋದೇ ಇಲ್ಲ.. ಇದು ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲೀವತರೆಗೂ ನಡೀತಾನೇ ಬಂದಿದೆ. ಇದೇ ಕಾರಣಕ್ಕೆ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಡಿಮೆ ಮಾಡೋದಕ್ಕೆ ಅಂತಾನೇ, ಸಿಸಿಟಿವಿ ಕಡ್ಡಾಯ ಅಳವಡಿಕೆಗೆ ಮುಂದಾಗಿದ್ದಾರಂತೆ ಮೋದಿ..
ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಿದ್ದೇ ಆದ್ರೆ, ಯಾಱರು ಏನೇನ್ ಮಾಡ್ತಿದ್ದಾರೆ? ಜನರ ಜೊತೆ ಹೇಗೆ ವರ್ತಿಸ್ತಾರೆ. ಎಷ್ಟು ಪ್ರಾಮಾಣಿಕವಾಗಿ ಶ್ರಮವಹಿಸಿ ಕೆಲಸ ಮಾಡ್ತಿದ್ದಾರೆ ಅನ್ನೋ ಕಂಪ್ಲೀಟ್ ಮಾಹಿತಿ ಸಿಗುತ್ತೆ. ಇಷ್ಟೇ ಅಲ್ಲ.. ಟೆಬಲ್ ಕೆಳಗಿನ ವ್ಯವಹಾರಕ್ಕೂ ಬ್ರೇಕ್ ಬೀಳಲಿದೆ. ಲಂಚ ತಗೊಳ್ಳೋ ಮನಸ್ಸೇ ಮಾಡೋದಿಲ್ಲ ಭ್ರಷ್ಟ ಅಧಿಕಾರಿಗಳು.. ಅದರಲ್ಲೂ ಎಲ್ಲಾ ವ್ಯವಸ್ಥೆ ಡಿಜಿಟಲ್ ಆದ್ರೆ, ಲಂಚವನ್ನೂ ಡಿಜಿಟಲ್ ರೂಪದಲ್ಲೇ ಪಾವತಿಸಬೇಕಾಗುತ್ತೆ. ಆಗ ಅದು ದಾಖಲೆಯಾಗಿ ಉಳಿದು ಬಿಡುತ್ತೆ. ಲಂಚ ತಗೊಂಡ ಅಧಿಕಾರಿ ಈಜಿಯಾಗಿ ತಗಲಾಕೊಂಡ್ ಬಿಡ್ತಾನೆ..
ಕಚೇರಿಗೆ ಬರದೇ ಸಂಬಳ ಪಡೆಯೋರಿಗೆ ಬೆಂಡು!: ಸರ್ಕಾರಿ ಕಚೇರಿಯಲ್ಲಿ ಬಯೋಮೆಟ್ರಿಕ್ ಮಷಿನ್!
ಇನ್ನು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋ ಬಹುತೇಕರು, ಸಮಯಕ್ಕೆ ಸರಿಯಾಗಿ ಆಫೀಸಿಗೆ ಬರೋದಿಲ್ಲ.. 10 ಗಂಟೆ ಅಂದ್ರೆ 11 ಗಂಟೆಗೆ ಬರ್ತಾರೆ.. ಸಂಜೆ 5 ಗಂಟೆವರೆಗೂ ಇರಬೇಕಾದವರು, 4 ಗಂಟೆಗೆ ಎಸ್ಕೇಪ್ ಅಗ್ತಾರೆ. ಹೀಗಾಗಿ, ಇಂಥಾ ಮೈಗಳ್ಳ ಸಿಬ್ಬಂದಿಗಳಿಗೆ ಬೆಂಡೆತ್ತಲು ಬಯೋಮೆಟ್ರಿಕ್ ಸಿಸ್ಟಮ್ ಅಳವಡಿಸೋ ಆಲೋಚನೆಯಲ್ಲಿದೆ ಕೆಂದ್ರ ಸರ್ಕಾರ. ಹೀಗಾದ್ರೆ, ಆಫೀಸಿಗೆ ಬರದೇ ಅಟೆಂಡೆನ್ಸ್ನಲ್ಲಿ ಸಹಿ ಹಾಕಿ ಸಂಬಳ ಪಡೀತಿದ್ದ ಮೈಗಳ್ಳರು, ಕಡ್ಡಾಯವಾಗಿ ಕಚೇರಿಗೆ ಬರಲೇಬೇಕು. ಟೈಂ ಮುಗಿಯೋವರೆಗೂ ಆಫೀಸಿನಲ್ಲಿ ಇರಲೇಬೇಕು.. ಇಲ್ಲವಾದಲ್ಲಿ ಸಂಬಳ ಕಟ್. ಪ್ರಮೋಷನ್ನೂ ಕಟ್. ಕೊನೆಗೆ ಕೆಲಸಾನೂ ಕಟ್ ಆಗಬಹುದು.
ಒಟ್ನಲ್ಲಿ ಭಾರತವನ್ನು ಭ್ರಷ್ಟ ಮುಕ್ತವಾಗಿಸಲು, ಮೋದಿ ಬತ್ತಳಿಕೆಯಲ್ಲಿ ಹಲವು ಅಸ್ತ್ರಗಳಿವೆ. ಆ ಕಠಿಣ ನಿಲುವುಗಳನ್ನು ಜಾರಿಗೆ ತರಲು ಮೋದಿ ಸಿದ್ಧತೆ ಮಾಡಿಕೊಂಡಿದ್ದು, ಡಿಸೆಂಬರ್ 30 ರ ನಂತರ ಮೋದಿ ಭ್ರಷ್ಟರ ಎದೆ ನಡುಗಿಸಿದ್ರೂ ಅಚ್ಚರಿ ಇಲ್ಲ..
ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್
