ಉತ್ತರಪ್ರದೇಶದ ವಾರಣಾಸಿಯ ರಸ್ತೆ ಬದಿಯ ಗೋಡೆಗಳ ಮೇಲೆ ನರೇಂದ್ರ ಮೋದಿ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಸ್ ಅಂಟಿಸಲಾಗಿದೆ. ಇನ್ನು ಪ್ರಧಾನಿ ಮೋದಿಯ ತವರು ಕ್ಷೇತ್ರ ವಾರಣಾಸಿಯಲ್ಲೇ ಇಂತಹ ಪೋಸ್ಟರ್ಸ್'ಗಳು ಅಂಟಿಸಿರುವುದು ಅಚ್ಚರಿ ಮೂಡಿಸಿವೆ.
ವಾರಣಾಸಿ(ಆ.21): ಉತ್ತರಪ್ರದೇಶದ ವಾರಣಾಸಿಯ ರಸ್ತೆ ಬದಿಯ ಗೋಡೆಗಳ ಮೇಲೆ ನರೇಂದ್ರ ಮೋದಿ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಸ್ ಅಂಟಿಸಲಾಗಿದೆ. ಇನ್ನು ಪ್ರಧಾನಿ ಮೋದಿಯ ತವರು ಕ್ಷೇತ್ರ ವಾರಣಾಸಿಯಲ್ಲೇ ಇಂತಹ ಪೋಸ್ಟರ್ಸ್'ಗಳು ಅಂಟಿಸಿರುವುದು ಅಚ್ಚರಿ ಮೂಡಿಸಿವೆ.
ಇನ್ನು ಗೋಡೆಗಳ ಮೇಲೆ ಅಂಟಿಸಿರುವ ಈ ಪೋಸ್ಟರ್'ಗಳ ಮೇಲೆ 'ವಾರಣಾಸಿ ಸಂಸದರು ನಾಪತ್ತೆಯಾಗಿದ್ದಾರೆ' ಎಂದು ಬರೆದಿದ್ದು, ಪಕ್ಕದಲ್ಲಿ ಮೋದಿ ಫೋಟೋ ಕೂಡಾ ಇದೆ. ಇದರೊಂದಿಗೆ ಪ್ರಧಾನಿ ಮೋದಿಯನ್ನು ಸಂಭೋದಿಸುತ್ತಾ 'ಅದ್ಯಾವ ದೇಶಕ್ಕೆ ನೀವು ಹೊರಟುಹೋಗಿದ್ದೀರಿ ಎಂಬುವುದು ನಮಗೆ ತಿಳಿಯದು. ಒಂದು ವೇಳೆ ಸಂಸದರು(ಮೋದಿ) ಸಿಗದಿದ್ದಲ್ಲಿ ನಾಪತ್ತೆಯಾಗಿದ್ದಾರೆಂದು ದೂರು ನೀಡುವುದಾಗಿ ಬರೆಯಲಾಗಿದೆ. ಈವರೆಗೂ ಈ ಪೋಸ್ಟರ್'ಗಳನ್ನು ಅಂಡಿಸಿದ್ದು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಪೋಸ್ಟರ್'ನ ಕೆಳ ಭಾಗದಲ್ಲಿ ನಿವೇದಕರ ಹೆಸರು ನಮೂದಿಸುವಲ್ಲಿ 'ಅಸಹಾಯಕ ಮತ್ತು ಹತಾಶ ಕಾಶಿವಾಸಿ' ಎಂದು ನಮೂದಿಸಲಾಗಿದೆ. ಇಂತಹ ಪೋಸ್ಟರ್'ಗಳು ಅಂಟಿಸಲಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ಜನರಲ್ಲಿ ಗೊಂದಲ ಮೂಡಿದೆ, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಧ್ಯರಾತ್ರಿಯೇ ಇವುಗಳನ್ನು ಹರಿದು ಎಸೆದಿದ್ದಾರೆ.
