ಲಕ್ನೋ[ಏ.01]: ಲೋಕಸಭಾ ಚುನಾವಣೆ 2019ಕ್ಕೆ ಭರ್ಕರಿ ಪ್ರಚಾರ ನಡೆಯುತ್ತಿದೆ. ಇಂತಹುದೇ ಒಂದು ಪ್ರಚಾರ ಕಾರ್ಯಕ್ರಮದಲ್ಲಿ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದ ಉತ್ತರ ಪ್ರದೇಶದ ಸಿಎಂ ಯೋಗಿ ಕಾಂಗ್ರೆಸ್  ಹಾಗೂ ಬಿಜೆಪಿ ಸರ್ಕಾರವನನ್ನು ಹೋಲಿಕೆ ಮಾಡುವ ಭರದಲ್ಲಿ ಬಹುದೊಡ್ಡ ಹೇಳಿಕೆಯನ್ನು ಕೊಟ್ಟಿದ್ದಾರೆ. ಸದ್ಯ ಅವರ ಈ ಜಹೆಳಿಕೆ ವಿವಾದ ಸೃಷ್ಟಿಸಿದೆ. ಅಷ್ಟಕ್ಕೂ ಯೋಗಿ ಹೇಳಿದ್ದೇನು? ಇಲ್ಲಿದೆ ವಿವರ

ಭಾಷಣ ಮಾಡುವ ಭರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಭಾರತೀಯ ಸೇನೆಯನ್ನು 'ಮೋದಿಜೀ ಸೇನೆ' ಎಂದು ಸಂಭೋದಿಸಿದ್ದಾರೆ. ಇದೇ ವಿಚಾರವನ್ನು ಎತ್ತಿ ಹಿಡಿದಿರುವ ವಿಪಕ್ಷಗಳು ಯೋಗಿ ತಮ್ಮ ಹೇಳಿಕೆಯಿಂದ ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿವೆ. 

ಭಾನುವಾರದಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೆಹಲಿ ಬಳಿಯ ಗಾಜಿಯಾಬಾದ್ ನಲ್ಲಿ ಸಮಾವೇಶವನ್ನುದ್ದೇಶಿಸಿ ಭಾಷಣ ಮಾಡಿದ್ದರು,. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ವಿಪಕ್ಷಗಳನ್ನು ಟೀಕಿಸುವ ಭರದಲ್ಲಿ ಭಾರತೀಯ ಸೇನೆಯನ್ನು ಪದೇ ಪದೇ  'ಮೋದಿಜೀ ಸೇನೆ' ಎಂದು ಸಂಭೋದಿಸಿದ್ದಾರೆ. ಇದೇ ವಿಚಾರವನ್ನು ಎತ್ತಿ ಹಿಡಿದಿರುವ ವಿಪಕ್ಷಗಳು ಯೋಗಿ ತಮ್ಮ ಹೇಳಿಕೆಯಿಂದ ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿವೆ. 

ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೋಲಿಸಿದ ಯೋಗಿ 'ಕಾಂಗ್ರೆಸ್ ನಾಯಕರು ಉಗ್ರರಿಗೆ ಬಿರಿಯಾನಿ ತಿನ್ನಿಸುತ್ತಾರೆ ಆದರೆ ಮೋದಿಯ ಸೇನೆ ಅವರಿಗೆ ಕೇವಲ ಗುಂಡೇಟುಗಳನ್ನು ನೀಡುತ್ತದೆ. ಕಾಂಗ್ರೆಸ್ ಹಾಗೂ ಮೋದಿಗಿರಿವ ಅಂತರ ಇದು. ಕಾಂಗ್ರೆಸ್ ನಾಯಕರು ಮಸೂದ್ ಅಜರ್ ನಂತಹ ಉಗ್ರರನ್ನು 'ಜೀ' ಎಂದು ಗೌರವಿಸುತ್ತದೆ ಆದರೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉಗ್ರರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸುತ್ತದೆ' ಎಂದಿದ್ದಾರೆ.

ಸಿಎಂ ಯೋಗಿ ಹೇಳಿಕೆಯನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಖಂಡಿಸಿದ್ದು, 'ಸಿಎಂ ಒಬ್ಬರು ಭಾರತೀಯ ಸೇನೆಯನ್ನು 'ಮೋದಿಜೀ ಸೇನೆ' ಎಂದಿರುವುದು ಮಚ್ಚರಿ ಮೂಡಿಸುವಂತಹದ್ದು. ಇಂತಹ ಅಪಾರ್ಥ ಹೇಳಿಕೆಗಳು ಮೂಲಕ ಭಾರತೀಯ ಸೇನೆಗೆ ಮಾಡುವ ಅವಮಾನ ' ಎಂದಿದ್ದಾರೆ.

ಇತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಯೋಗಿ ನೀಡಿರುವ ಈ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ ಹಾಗೂ ತಮ್ಮ ಹೇಳಿಕೆಗೆ ಸಿಎಂ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಪ್ರಿಯಾಂಕಾ 'ಇದು ಭಾರತೀಯ ಸೇನೆಗೆ ಮಾಡಿದ ಅವಮಾ. ಅವರು ನಮ್ಮ ಹೆಮ್ಮೆಯ ಭಾರತೀಯ ಸೇನಾ ಯೋಧರು, ಯಾವುದೋ ಖಾಸಗಿ ಪ್ರಚಾರ ಮಂತ್ರಿಯ ಸೇನಾನಿಗಳಲ್ಲ. ಯೋಗಿ ಆದಿತ್ಯನಾಥ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು' ಎಂದಿದ್ದಾರೆ.