ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ತಿಂಗಳು ಮೂರನೇ ಬಾರಿಗೆ  ಗುಜರಾತ್'ಗೆ  ಭೇಟಿ ನೀಡಲಿದ್ದಾರೆ. ಹಲವು ಯೋಜನೆಗಳನ್ನು ರಾಜ್ಯಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಅವರು ತಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದು 19ನೇ ಬಾರಿ.

ಅಹಮದಾಬಾದ್(ಅ.22): ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ತಿಂಗಳು ಮೂರನೇ ಬಾರಿಗೆ ಗುಜರಾತ್'ಗೆ ಭೇಟಿ ನೀಡಲಿದ್ದಾರೆ. ಹಲವು ಯೋಜನೆಗಳನ್ನು ರಾಜ್ಯಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಅವರು ತಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದು 19ನೇ ಬಾರಿ.

ಇದು ಈ ತಿಂಗಳಲ್ಲಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಮೂರನೇ ಬಾರಿ. ಗುಜರಾತ್‌'ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ ಪ್ರಾಂತಗಳಿಗೆ ಜಲ ಸಂಪರ್ಕ ಕಲ್ಪಿಸುವ ರೊರೊ ಸಮುದ್ರಯಾನ ಸೇವೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಅವರು ವಡೋದರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು ₹ 1,140 ಕೋಟಿ ವೆಚ್ಚದ ಹಲವು ಯೋಜನೆಗಳಿಗೆ ಪ್ರಧಾನಿ ಈ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ. ಆನಂತರ ವಡೋದರಾ ವಿಮಾನ ನಿಲ್ದಾಣದವರೆಗೂ 14 ಕಿ.ಮೀ ರೋಡ್ ಷೋ ನಡೆಸಲಿದ್ದಾರೆ.

ಸೌರಾಷ್ಟ್ರದ ಭಾವಂಗರ್ ಜಿಲ್ಲೆಯ ಘೋಗ ಮತ್ತು ದಕ್ಷಿಣ ಗುಜರಾತ್‌ನ ದಹೇಜ್ಗಳ ಮಧ್ಯೆ ಸಮುದ್ರಯಾನ ಸೇವೆ ಆರಂಭವಾಗಲಿದೆ. ಸಮುದ್ರಯಾನ ಸೇವೆಯಿಂದ ಈ ನಗರಗಳ ನಡುವಣ ಪ್ರಯಾಣದ ಅವಧಿ ಹತ್ತು ಪಟ್ಟು ಕಡಿಮೆ ಆಗಲಿದೆ ಎಂದು ಮೂಲಗಳು ಹೇಳಿವೆ. ಡಿಸೆಂಬರ್‌ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಮೋದಿ ಈ ಭೇಟಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.