ಮಾತು ಮರೆತ ಮೋದಿ..! ಮೈಸೂರನ್ನು ಪ್ಯಾರಿಸ್ ಮಾಡ್ತೀವಿ ಎಂದಿದ್ದ ಮೋದಿ 2 ಬಾರಿ ಬಂದರೂ ತುಟಿ ಬಿಚ್ಚಿಲ್ಲ..!

Modi In Mysuru Forgets Promise of Paris
Highlights

ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ಮೈಸೂರಿಗೆ ಬಂದ ನರೇಂದ್ರ ಮೋದಿ, ಒಮ್ಮೆಯೂ ಮೈಸೂರನ್ನು ಪ್ಯಾರಿಸ್ ಮಾಡುವ ಬಗ್ಗೆ ತುಟಿ ಬಿಚ್ಚಿಲ್ಲ. ಮೈಸೂರಿನ ರೈಲು ನಿಲ್ದಾಣದಲ್ಲಿ ರೈಲ್ವೇ ವಿದ್ಯುದ್ದೀಕರಣ ಯೋಜನೆಗೆ ಮೋದಿ ಹಸಿರು ನಿಶಾನೆ ತೋರಿದರು.

ಮೈಸೂರು(ಫೆ.19): ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಂಸ್ಕೃತಿಕ ನಗರಿ ಮೈಸೂರನ್ನು ಪ್ಯಾರಿಸ್ ಆಗಿ ಬದಲಾಯಿಸುತ್ತೇವೆ ಎಂದು ಮೋದಿ ಹೇಳಿಕೆ ನೀಡಿ 4 ವರ್ಷಗಳೇ ಕಳೆದರೂ ಮೈಸೂರು ಇನ್ನೂ ಪ್ಯಾರಿಸ್ ಆಗಿ ಬದಲಾಗಿಲ್ಲ.

ಪ್ರಧಾನಿಯಾದ ಬಳಿಕ ಎರಡನೇ ಬಾರಿಗೆ ಮೈಸೂರಿಗೆ ಬಂದ ನರೇಂದ್ರ ಮೋದಿ, ಒಮ್ಮೆಯೂ ಮೈಸೂರನ್ನು ಪ್ಯಾರಿಸ್ ಮಾಡುವ ಬಗ್ಗೆ ತುಟಿ ಬಿಚ್ಚಿಲ್ಲ. ಮೈಸೂರಿನ ರೈಲು ನಿಲ್ದಾಣದಲ್ಲಿ ರೈಲ್ವೇ ವಿದ್ಯುದ್ದೀಕರಣ ಯೋಜನೆಗೆ ಮೋದಿ ಹಸಿರು ನಿಶಾನೆ ತೋರಿದರು.

2014ರ ಲೋಕಸಭಾ ಚುನಾವಣಾ ಪ್ರಚಾರದ ಸಲುವಾಗಿ ಮೈಸೂರಿಗೆ ಬಂದಿದ್ದ ಮೋದಿ, ನಮ್ಮ ಸರ್ಕಾರ ಅಧಿಕಾರಕ್ಕೇರಿದರೆ ಮೈಸೂರನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ದಿ ಪಡಿಸುತ್ತೇವೆ. ಈ ಹಿಂದೆ ನೀವೆಲ್ಲ ಬರೀ ಭಾಷಣವನ್ನು ಕೇಳಿದ್ದೀರಿ ಆದರೆ ಯಾವುದೇ ಅಭಿವೃದ್ದಿಯಾಗಿಲ್ಲ. ಪ್ರವಾಸೋದ್ಯಮ ಅಭಿವೃದ್ದಿಯಾದರೆ, ಮೈಸೂರಿನ ಮಂದಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯುತ್ತದೆ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ಆದರೆ ಸಮಸ್ಯೆ ಏನೆಂದರೆ ಡೆಲ್ಲಿಯಲ್ಲಿರುವ ಸರ್ಕಾರಕ್ಕೆ ಇದೆಲ್ಲಾ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು.

ಮೋದಿ ಮೈಸೂರಿಗೆ ಬರ್ತಿರೋದು ನಮಗೆ ಸಂತಸ ತಂದಿದೆ. ಕಳೆದ ಬಾರಿ ಮೈಸೂರಿಗೆ ಬಂದಾಗ ಮೈಸೂರನ್ನ ಪ್ಯಾರಿಸ್ ಮಾಡ್ತಿನಿ ಅಂದಿದ್ರು, ನುಡಿದಂತೆ ನಡೆದುಕೊಳ್ಳಿ ಅಂತಾ ಕೇಳಿಕೊಳ್ಳುತ್ತೇವೆ ಎಂದು ಮೋದಿ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

loader