ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನ್ಯ ಕ್ರಮ ಹಾಗೂ ಸೇಡಿನ ರಾಜಕೀಯದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಬಿಜೆಪಿ ಏನೇ ಹೇಳಲಿ, ನಾವು ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ, ಎಂದು ಟೆಎಂಸಿ ಮುಖಂಡ ಸೌಗಾತಾ ರಾಯ್ ಹೇಳಿದ್ದಾರೆ.

ನವದೆಹಲಿ (ಜ.05): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮ ಹಾಗೂ ಸಂಸದ ಸುದೀಪ್ ಬಂದೋಪಧ್ಯಾಯ ಬಂಧನವನ್ನು ಖಂಡಿಸಿ ತೃಣಮೂಲ ಕಾಂಗ್ರೆಸ್ ಇಂದು ಸಂಸತ್ತಿನ ದಕ್ಷಿಣ ಬ್ಲಾಕ್’ನಲ್ಲಿರುವ ಪ್ರಧಾನ ಮಂತ್ರಿ ಕಚೇರಿ ಬಳಿ ಪ್ರತಿಭಟಿಸಿತು.

ಮೋದಿ ಹಠಾವೋ ದೇಶ್ ಬಚಾವ್ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಕಾರರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನ್ಯ ಕ್ರಮ ಹಾಗೂ ಸೇಡಿನ ರಾಜಕೀಯದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಬಿಜೆಪಿ ಏನೇ ಹೇಳಲಿ, ನಾವು ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ, ಎಂದು ಟೆಎಂಸಿ ಮುಖಂಡ ಸೌಗಾತಾ ರಾಯ್ ಹೇಳಿದ್ದಾರೆ.

ನಾವು ಸೇಡಿನ ರಾಜಕೀಯಕ್ಕೆ ಅಥವಾ ಸಿಬಿಐಗೆ ಬೆದರುವವರಲ್ಲ ಎಂದು ತೊರಿಸಲು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ವಿರುದ್ಧ ನಾವು ಹೋರಾಟವನ್ನು ಮಉಂದುವರೆಸುತ್ತೇವೆ, ಎಂದು ಅವರು ಹೇಳಿದ್ದಾರೆ.