ದೇಶದ ಶೇ.40ರಷ್ಟುಮಂದಿಯನ್ನು ಒಳಗೊಳ್ಳುವ ಆರೋಗ್ಯ ವಿಮೆಯಾದ ಮೋದಿಕೇರ್‌ ಯೋಜನೆಯು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯಂದು ಜಾರಿಗೆ ಬರಲಿದೆ.

ರಾಯ್‌ಪುರ: ದೇಶದ ಶೇ.40ರಷ್ಟುಮಂದಿಯನ್ನು ಒಳಗೊಳ್ಳುವ ಆರೋಗ್ಯ ವಿಮೆಯಾದ ಮೋದಿಕೇರ್‌ ಯೋಜನೆಯು ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯಂದು ಜಾರಿಗೆ ಬರಲಿದೆ.

ಅಂದು ಸಂಸತ್ತಿನಲ್ಲಿ ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಗೌರವ ನಮನ ಸಲ್ಲಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಛತ್ತೀಸ್‌ಗಢಕ್ಕೆ ತೆರಳಿ, ತಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಮೋದಿಕೇರ್‌ ಮತ್ತು ಆಯುಷ್ಮಾನ್‌ ಭಾರತ್‌ ರಾಷ್ಟ್ರೀಯ ಆರೋಗ್ಯ ರಕ್ಷಣೆ ಮತ್ತು ವನಧನ ಯೋಜನೆಗಳಿಗೆ ಚಾಲನೆ ನೀಡಿಲಿದ್ದಾರೆ.

ದೇಶಾದ್ಯಂತ ಜಾರಿಗೊಳಿಸಲು ನಿರ್ಧರಿಸಲಾಗಿದ್ದ ಮೋದಿಕೇರ್‌ಗೆ ಇತ್ತೀಚೆಗಷ್ಟೇ ಸಂಸತ್ತು ಅನುಮೋದನೆ ನೀಡಿದ್ದು, ಈ ಯೋಜನೆಗೆ ಛತ್ತೀಸ್‌ಗಢದ ಬಿಜಾಪುರದಲ್ಲಿ ಚಾಲನೆ ಪಡೆಯಲಿದೆ.