100ರ ಹೊಸ್ತಿಲಲ್ಲಿ ಮೋದಿ ಸರ್ಕಾರ: ಯಾರು, ಯಾವ ಸಾಧನೆಗೆ ಸರದಾರ?

100ರ ಹೊಸ್ತಿಲಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ| 100ನೇ ದಿನಕ್ಕೆ ಕಾಲಿಡಲಿದೆ ಮೋದಿ 2.0 ಸರ್ಕಾರ| 100 ದಿನಗಳ ಸಾಧನೆಯ ಕಿರು ಹೊತ್ತಿಗೆ ಪ್ರಕಟಿಸಲಿರುವ ಕೇಂದ್ರ ಸರ್ಕಾರ| ಕೆಲಸಗಳ ವಿವರ ನೀಡುವಂತೆ ಎಲ್ಲಾ ಸಚಿವಾಲಯಗಳಿಗೆ ಪ್ರಧಾನಿ ಕಾರ್ಯಾಲಯ ಸೂಚನೆ|

Modi Government To Publish 100-day Achievement List  Soon

ನವದೆಹಲಿ(ಸೆ.03): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್‌ಡಿಎ ಸರ್ಕಾರ ಇದೀಗ 100 ದಿನಗಳ ಹೊಸ್ತಿಲಲ್ಲಿದೆ. ಈ ನೂರು ದಿನಗಳಲ್ಲಿ ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಜನತೆಗೆ ತನ್ನ ನೂರು ದಿನಗಳ ಸಾಧನೆಯನ್ನು ತಿಳಿಸಲು ಮೋದಿ ಸರ್ಕಾರ ಸಜ್ಜಾಗಿದೆ.

ಪ್ರಮುಖವಾಗಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಸಂವಿಧಾನ ವಿಧಿ 370 ರದ್ದು, ತ್ರಿವಳಿ ತಲಾಖ್ ನಿಷೇಧ ಮಸೂದೆ ಅನುಮೋದನೆ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಕೈಗೊಂಡ ಕ್ರಮಗಳ ಕುರಿತಾದ ಮಾಹಿತಿ ಇರುವ ಕಿರು ಹೊತ್ತಿಗೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಾಗಿದೆ. 

ಕಳೆದ 100 ದಿನಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ ವಿವರ ನೀಡುವಂತೆ ಪ್ರಮುಖ ಸಚಿವಾಲಯಗಳಿಗೆ ಪ್ರಧಾನ ಮಂತ್ರಿ ಸಚಿವಾಲಯ ಸೂಚಿಸಿದ್ದು, ಈ ಎಲ್ಲಾ ಉಪಕ್ರಮಗಳು ಮತ್ತು ಸಾಧನೆಗಳ ಪಟ್ಟಿಗಳನ್ನು ಹೊತ್ತ ಕಿರು ಹೊತ್ತಿಗೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.

100 ದಿನಗಳನ್ನು ಕೇಂದ್ರ ಸರ್ಕಾರ ಪೂರೈಸುವ ದಿನ ಪ್ರಧಾನಿ ಮೋದಿಯವರು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿರಲಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಗಗನನೌಕೆ ಇಳಿಯುವುದನ್ನು ಅವರು ಕಣ್ತುಂಬಿಕೊಳ್ಳಲಿದ್ದಾರೆ.

Latest Videos
Follow Us:
Download App:
  • android
  • ios