Asianet Suvarna News Asianet Suvarna News

114 ಯುದ್ಧ ವಿಮಾನ ಖರೀದಿಸಲು ಮೋದಿ ಸರ್ಕಾರ ಒಪ್ಪಿಗೆ..?

ಇದನ್ನು ‘ಮದರ್ ಆಫ್ ಆಲ್ ಡಿಫೆನ್ಸ್ ಡೀಲ್’ ಎಂದು ಬಣ್ಣಿಸಲಾಗುತ್ತಿದೆ. ಮಾಸಾಂತ್ಯ ಅಥವಾ ಮುಂದಿನ ತಿಂಗಳು ರಕ್ಷಣಾ ಖರೀದಿ ಮಂಡಳಿ ಸಭೆ ನಡೆಯಲಿದ್ದು, 114 ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ‘ಅವಶ್ಯಕತಾ ಒಪ್ಪಿಗೆ’ ಪ್ರಸ್ತಾವವನ್ನು ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Modi government mulls purchase of 114 new fighter jets amid Rafale row
Author
New Delhi, First Published Sep 4, 2018, 9:37 AM IST

ನವದೆಹಲಿ[ಆ.04]: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪಗಳನ್ನು ಮಾಡುತ್ತಿರುವಾಗಲೇ, ಬರೋಬ್ಬರಿ 1.4 ಲಕ್ಷ ಕೋಟಿ ರು. ವೆಚ್ಚದಲ್ಲಿ 114 ಹೊಸ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ‘ಮದರ್ ಆಫ್ ಆಲ್ ಡಿಫೆನ್ಸ್ ಡೀಲ್’ ಎಂದು ಬಣ್ಣಿಸಲಾಗುತ್ತಿದೆ. ಮಾಸಾಂತ್ಯ ಅಥವಾ ಮುಂದಿನ ತಿಂಗಳು ರಕ್ಷಣಾ ಖರೀದಿ ಮಂಡಳಿ ಸಭೆ ನಡೆಯಲಿದ್ದು, 114 ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ‘ಅವಶ್ಯಕತಾ ಒಪ್ಪಿಗೆ’ ಪ್ರಸ್ತಾವವನ್ನು ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

114 ಯುದ್ಧ ವಿಮಾನಗಳ ಪೂರೈಕೆಗೆ ಈಗಾಗಲೇ 6 ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿದ್ದು, ಇತ್ತೀಚೆಗಷ್ಟೇ ರಷ್ಯಾದ ಸುಖೋಯ್ -35 ವಿಮಾನ ಕೂಡ ರೇಸ್‌ಗೆ ಪ್ರವೇಶವಾಗಿದೆ. ಉದ್ದೇಶಿತ ಯೋಜನೆಯ ಪ್ರಕಾರ ವಿಮಾನ ಪೂರೈಕೆ ಕಂಪನಿ ಜತೆ ಒಪ್ಪಂದ ಕುದುರಿದರೆ, ಒಪ್ಪಂದಕ್ಕೆ ಸಹಿ ಬಿದ್ದ 3-5 ವರ್ಷಗಳಲ್ಲಿ 18 ವಿಮಾನಗಳು ಹಾರಾಟ ಸ್ಥಿತಿಯಲ್ಲಿ ಭಾರತಕ್ಕೆ ಬರಲಿವೆ.

ಉಳಿದವನ್ನು ಭಾರತದಲ್ಲೇ ದೇಶಿ ಕಂಪನಿ ಸಹಭಾಗಿತ್ವದಲ್ಲಿ ಉತ್ಪಾದಿಸಲಾಗುತ್ತಿದೆ. ವಿದೇಶಿ ವಿಮಾನ ಕಂಪನಿ ಹಾಗೂ ಅದರ ಭಾರತೀಯ ಪಾಲುದಾರ ಕಂಪನಿಗಳ ಜತೆ ಮಾತುಕತೆ ಮುಗಿದರೂ, ಒಪ್ಪಂದಕ್ಕೆ ಸಹಿ ಹಾಕಲು 4-5 ವರ್ಷಗಳೇ ಬೇಕಾಗುತ್ತವೆ. ಪ್ರತಿ ವಿಮಾನಕ್ಕೂ 710 ಕೋಟಿ ರು. ವೆಚ್ಚವಾಗಲಿದೆ. ಶಸ್ತ್ರಾಸ್ತ್ರ ಸೇರಿದಂತೆ ಇತರೆ ಪದಾರ್ಥಗಳಿಗೆ ಇನ್ನೂ ಹೆಚ್ಚುವರಿಯಾಗಿ 710 ಕೋಟಿ ರು. ಬೇಕಾಗುತ್ತದೆ. 

Follow Us:
Download App:
  • android
  • ios