ನವದೆಹಲಿ[ಮಾ.12]: ‘ಕನ್ನಡ ಒಂದು ಸುಂದರ ಭಾಷೆ’ ಎಂದು ತಮ್ಮ ಟ್ವೀಟರ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.

ಇತ್ತೀಚೆಗೆ ಮೋದಿ ಅವರ ಅಭಿಮಾನಿ ಸಹನಾ (ರೇಣುಕಾ) ಹೊಳಿಮಠ , ‘ಮೋದೀಜೀ ಕನ್ನಡದಲ್ಲಿ ಭಾಷಣ ಮಾತನಾಡಿದಾಗ ಎಷ್ಟುಖುಷಿ ಆಗುತ್ತೆ ಅಲ್ವಾ?’ ಎಂಬುವವರು ಟ್ವೀಟ್‌ ಮಾಡಿದ್ದರು. ಇದಕ್ಕೆ ಸೋಮವಾರ ಉತ್ತರಿಸಿರುವ ಮೋದಿ, ‘ಕನ್ನಡ ಒಂದು ಸುಂದರ ಭಾಷೆ’ ಎಂದು ಬಣ್ಣಿಸಿದ್ದಾರೆ.

ಕರ್ನಾಟಕದಲ್ಲಿ ಭಾಷಣದ ಆರಂಭದಲ್ಲಿ ಮೋದಿ ಅವರು ಕೆಲವು ಸಾಲುಗಳನ್ನು ಕನ್ನಡದಲ್ಲಿ ಮಾತನಾಡುವುದು ರೂಢಿ.