ಮೋದಿ ಚಹಾ ಮಾರುತ್ತಿದ್ದ ವಡನಗರ ರೈಲು ನಿಲ್ದಾಣದ ಅಭಿವೃದ್ದಿಗೂ 7.9 ಕೋಟಿ ರೂಪಾಯಿ ಅನುದಾನ ಸಿಕ್ಕಿದೆ.

ಆಹ್ಮದಾಬಾದ್(ಏ.25): ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾಲ್ಯ ಜೀವನವನ್ನು ಕಳೆದಿದ್ದ ಮನೆ ಶೀಘ್ರ ಮ್ಯೂಸಿಯಂ ಆಗಿ ಪರಿವರ್ತನೆಯಾಗಲಿದೆ.

ಮೋದಿ ಅವರ ಕುಟುಂಬ ಈ ಹಿಂದೆ ವಾಸಿಸಿದ್ದ ಗುಜರಾತಿನ ಮೆಹ್ಸಾನಾ ಜಿಲ್ಲೆ ವಡಾನಗರದಲ್ಲಿರುವ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಉದ್ದೇಶಿಸಿದೆ.

ಮೋದಿ ಅವರ ಕುಟುಂಬ ಸಾಧಾರಣವಾದ ಈ ಮನೆಯನ್ನು ಮಾರಾಟ ಮಾಡಿ ಗಾಂಧಿನಗರಕ್ಕೆ ಸ್ಥಳಾಂತರಗೊಂಡಿತ್ತು. ಈ ಮನೆಯಲ್ಲೇ ಮೋದಿ ತಮ್ಮ ಬಾಲ್ಯ ಕಳೆದಿದ್ದರು.

 ಮೋದಿ ಚಹಾ ಮಾರುತ್ತಿದ್ದ ವಡನಗರ ರೈಲು ನಿಲ್ದಾಣದ ಅಭಿವೃದ್ದಿಗೂ 7.9 ಕೋಟಿ ರೂಪಾಯಿ ಅನುದಾನ ಸಿಕ್ಕಿದೆ.