ಆದಾಯ ತೆರಿಗೆ ಇಲಾಖೆ ಶುಬೆಂದೊ ಅವರ ಬ್ಲ್ಯಾಕ್ ಬೆರ್ರಿ ಹಾಗೂ ಲ್ಯಾಪ್'ಟಾಪ್'ಗಳನ್ನು ಪರಿಪೂರ್ಣವಾಗಿ ಪರಿಶೀಲಿಸಿದಾಗ ಈ ಅಂಶ ಬಹಿರಂಗಗೊಂಡಿದೆ.

ನವದೆಹಲಿ(ನ.15): ನೋಟು ರದ್ದಿನ ಬಗ್ಗೆ ದೇಶದಲ್ಲಡೆ ಪರ-ವಿರೋಧ ಚರ್ಚೆ, ಬ್ಯಾಂಕ್,ಎಟಿಎಂ ಮುಂದೆ ಕ್ಯೂ ಮುಂತಾದ ಚಟುವಟಿಕೆಗಳು ನಡೆಯುತ್ತಿರುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆದಿತ್ಯ ಬಿರ್ಲಾ ಗ್ರೂಪ್ ಸಂಸ್ಥೆಯಿಂದ 2012 ನವೆಂಬರ್ 16 ರಂದು ಕೆಲವು ಯೋಜನೆಗಳಿಗೆ ಸಂಬಂಧಿಸಿದಂತೆ ಸ್ವತಃ ಲಂಚ ತೆಗೆದುಕೊಂಡಿದ್ದರು. ಆದಾಯ ತೆರಿಗೆ ಇಲಾಖೆ ಶುಬೆಂದು ಅಮಿತಾಭ್ ಮನೆಗೆ 2013 ಅಕ್ಟೋಬರ್ 15 ರಂದು ದಾಳಿ ನಡೆಸಿದಾಗ ಈ ವಿಷಯ ಬಹಿರಂಗಗೊಂಡಿದೆ.ಶುಬೆಂದೊ ಅವರು ಲಂಚ ನೀಡಿದ ಸಮಯದಲ್ಲಿ ಆದಿತ್ಯ ಬಿರ್ಲಾ ಗ್ರೂಪ್'ನ ಕಾರ್ಯಕಾರಿ ಅಧ್ಯಕ್ಷರಾಗಿದ್ದರು.

ಆದಾಯ ತೆರಿಗೆ ಇಲಾಖೆ ಶುಬೆಂದೊ ಅವರ ಬ್ಲ್ಯಾಕ್ ಬೆರ್ರಿ ಹಾಗೂ ಲ್ಯಾಪ್'ಟಾಪ್'ಗಳನ್ನು ಪರಿಪೂರ್ಣವಾಗಿ ಪರಿಶೀಲಿಸಿದಾಗ ಈ ಅಂಶ ಬಹಿರಂಗಗೊಂಡಿದೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಲಂಚ ಸ್ವೀಕರಿಸಿರುವ ಬಗ್ಗೆ ಲಡ್ಜರ್'ನಲ್ಲಿ ಕೂಡ ದಾಖಲಾಗಿದೆ'ಎಂದು ಆಪಾದಿಸಿದ್ದಾರೆ.

ಅಲ್ಲದೆ ಆಗ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಅವರು ಮೋದಿಯವರ ಮೇಲೆ ಕ್ರಮಕ್ಕೆ ಮುಂದಾದರೂ ನಂತರ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಪ್ರಕರಣಕ್ಕೆ ಎಳ್ಳುನೀರು ಬಿಟ್ಟಿವೆ ಎಂದು ಇಂಡಿಯನ್ ಎಕ್ಸ್'ಪ್ರೆಸ್ ವರದಿ ಮಾಡಿದೆ.