ಕರ್ನಾಟಕದ ಸಂಸದರೊಬ್ಬರ ಕೆಲಸವನ್ನು ಮೆಚ್ಚಿ ಶ್ಲಾಘಿಸಿದ ಮೋದಿ; ಯಾರದು ಸಂಸದ?

First Published 22, Jan 2018, 7:52 AM IST
Modi Appriciate Karnataka MP Bhagavanta Khuba in TV Interview
Highlights

ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಸುದ್ದಿವಾಹಿನಿಗೆ ಕೊಟ್ಟಿರುವ ಸಂದರ್ಶನ ಒಂದರಲ್ಲಿ ಕರ್ನಾಟಕದ ಸಂಸದರೊಬ್ಬರನ್ನ ಹೊಗಳಿದ್ದಾರೆ. ತಮ್ಮ ಸರ್ಕಾರದ ಫಸಲ್ ಭೀಮಾ ಯೋಜನೆಯನ್ನ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಕ್ಕಾಗಿ ಪ್ರಶಂಸಿದ್ದಾರೆ. ಹಾಗಾದರೆ ಯಾರು ಆ ಸಂಸದ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಂಗಳೂರು (ಜ.22): ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಸುದ್ದಿವಾಹಿನಿಗೆ ಕೊಟ್ಟಿರುವ ಸಂದರ್ಶನ ಒಂದರಲ್ಲಿ ಕರ್ನಾಟಕದ ಸಂಸದರೊಬ್ಬರನ್ನ ಹೊಗಳಿದ್ದಾರೆ. ತಮ್ಮ ಸರ್ಕಾರದ ಫಸಲ್ ಭೀಮಾ ಯೋಜನೆಯನ್ನ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಕ್ಕಾಗಿ ಪ್ರಶಂಸಿದ್ದಾರೆ. ಹಾಗಾದರೆ ಯಾರು ಆ ಸಂಸದ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾಜ್ಯದ ಸಂಸದರೊಬ್ಬರ ಕೆಲಸವನ್ನ ಹೊಗಳಿದ್ದಾರೆ.  ಬೀದರ್ ನಲ್ಲಿ ಕಳೆದ ಕೆಲ ತಿಂಗಳ ಹಿಂದೆ ಸುರಿದಿದ್ದ ಅಕಾಲಿಕ ಮಳೆಯಿಂದ ರೈತರು ಬೆಳೆದಿದ್ದ ಬೆಳೆ ಹಾನಿಗೀಡಾಗಿತ್ತು. ಆಗ ದಿಚ್ಚುತೋಚದಂತಾಗಿದ್ದ ರೈತರ ನೆರವಿಗೆ ಬಂದಿದ್ದು ಸಂಸದ ಭಗವಂತ್ ಖೂಬಾ. ಈ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಸಂಸದ ಖೂಬಾರ ಹೆಸರು ಹೇಳದೆ, ಬೀದರ್ ಸಂಸದ ಎಂದಿದ್ದರು. ಇದೀಗ, ಮೋದಿ ಉಲ್ಲೇಖಿಸಿದ್ದು ಸಂಸದ ಭಗವಂತ್ ಖೂಬಾ ಹೆಸರು ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ಪ್ರಶಂಸೆ ಹಿನ್ನೆಲೆ, ಸುವರ್ಣ ನ್ಯೂಸ್ ಗೆ ಬಿಜೆಪಿ ಸಂಸದ ಭಗವಂತ ಖೂಬ ಪ್ರತಿಕ್ರಿಯಿಸಿದ್ದು, ಸಂಸದೀಯ ಮಂಡಳಿ ಸಭೆ ಹಾಗೂ ಬೀದರ್'ಗೆ ಬಂದಾಗಲೂ ಮೋದಿ ಪ್ರಶಂಸಿದ್ದರು. ಫಸಲ್ ಭೀಮಾ ಯೋಜನೆಗೆ ಜಿಲ್ಲೆಯಲ್ಲಿ ಹೆಚ್ಚಿನ ರೈತರು ನೋಂದಣಿ ಮಾಡಿಸಿದ್ದು, 2016-17ನೇ ಸಾಲಿನಲ್ಲಿ  ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದ ಸುಮಾರು 1 ಲಕ್ಷ 21 ಸಾವಿರ ರೈತರಿಗೆ ಪರಿಹಾರ ನೀಡಲಾಗಿದೆ ಎಂದಿದ್ದಾರೆ.

loader