ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾರಕ ಎಂದು ನೂತನ ಶಾಸಕರಾಗಿ ಆಯ್ಕೆಯಾಗಿರವ ದಲಿತ ನಾಯಕ ಜಿಗ್ನೇಶ್ ಮೆವಾನಿ ರ್ಯಾಲಿಯಲ್ಲಿ ಹೇಳಿದ್ದಾರೆ.

ನವದೆಹಲಿ (ಜ.09): ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾರಕ ಎಂದು ನೂತನ ಶಾಸಕರಾಗಿ ಆಯ್ಕೆಯಾಗಿರವ ದಲಿತ ನಾಯಕ ಜಿಗ್ನೇಶ್ ಮೆವಾನಿ ರ್ಯಾಲಿಯಲ್ಲಿ ಹೇಳಿದ್ದಾರೆ.

ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್'ನಲ್ಲಿ ಮೇವಾನಿ ರ್ಯಾಲಿ ನಡೆಸಲು ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮೇವಾನಿ, ಜನಪ್ರತಿನಿಧಿಯೊಬ್ಬನಿಗೆ ಈ ರೀತಿ ಅವಕಾಶ ನೀಡದೇ ಇರುವುದು ಗುಜರಾತ್ ಮಾಡೆಲ್ ಎಂದು ಟೀಕಿಸಿದ್ದಾರೆ.

ಗುಜರಾತ್ ಚುನಾವಣೆಯ ಬಳಿಕ ರಾಹುಲ್ ಹೇಳಿದ ಹೇಳಿಕೆಯನ್ನು ಆಧರಿಸುತ್ತಾ, ನಾನು ರಾಜಕೀಯ ಮೌಲ್ವವನ್ನು, ಸಾಂವಿಧಾನಿಕ ಮೌಲ್ಯವನ್ನು ಎತ್ತಿ ಹಿಡಿಯುತ್ತೇನೆ. ದೇಷ ರಾಜಕಾರಣದ ವಿರುದ್ಧ ನಿಲ್ಲುತ್ತೇನೆ ಎಂದು ಮೇವಾನಿ ಹೇಳಿದ್ದಾರೆ.

ರಾಜಕೀಯ ಒಗ್ಗಟ್ಟಿನಲ್ಲಿ, ರಾಜಕೀಯ ಪ್ರೀತಿಯಲ್ಲಿ ನಂಬಿಕೆ ಇದೆ. ನಮಗೆ ಲವ್ ಜಿಹಾದ್'ನಲ್ಲಿ ನಂಬಿಕೆ ಇಲ್ಲ. ಗುಜರಾತ್'ನಲ್ಲಿ ಬಿಜೆಪಿ ಅಹಂಕಾರವನ್ನು ಮುರಿದಿದ್ದಕ್ಕಾಗಿ ನನ್ನನ್ನು, ಅಲ್ಪೇಶ್ ಠಾಕೋರ್ ಹಾಗೂ ಹಾರ್ದಿಕ್ ಪಟೇಲ್;ರನ್ನು ಟಾರ್ಗೆಟ್ ಮಾಡಲಾಯಿತು. ನಮ್ಮ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆದರಿಕೆ ಎದುರಾಗಿದೆ ಎಂದು ಮೇವಾನಿ ಹೇಳಿದ್ದಾರೆ.