ನವದೆಹಲಿ, [ನ.02]:  ಕಳೆದ ಎರಡು ದಿನದ ಹಿಂದೆ ದೆಹಲಿಯ ವಬಾನಾ ಪ್ರದೇಶದಲ್ಲಿ ನಡೆದ 38 ವರ್ಷದ ಶಿಕ್ಷಕಿಯೊಬ್ಬಳ ಹತ್ಯೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ 26 ವರ್ಷದ ಮಾಡೆಲ್ ಏಂಜಲ್ ಗುಪ್ತಾ ಹಾಗೂ ಶಿಕ್ಷಕಿಯ ಪತಿ ಮಂಜೀತ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಶಿಕ್ಷಕಿ ಪತಿ ಮಂಜೀತ್ ಹಾಗೂ ಮಾಡೆಲ್ ಏಂಜೆಲ್ ಗುಪ್ತಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದ್ರಿಂದ ಮಾಡೆಲ್ ಮೇಲಿನ ಆಸೆಗೆ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

ಶಿಕ್ಷಕಿ ಸುನಿತಾ  ಡೈರಿಯಲ್ಲಿ ಏಂಜಲ್ ಗುಪ್ತಾ ಬಗ್ಗೆ ಮಾಹಿತಿಯಿತ್ತು. ಈ ಬಗ್ಗೆ ಏಂಜಲ್ ಗುಪ್ತಾಳನ್ನು ವಶಕ್ಕೆ ಪಡೆದ ಪೊಲೀಸರು ಕಾಲ್ ಹಿಸ್ಟರಿ ಪರಿಶೀಲಿಸಿದ್ದಾರೆ.

ಈ ವೇಳೆ ಸುನಿತಾ ಪತಿ  ಮಂಜೀತ್ ಹಾಗೂ ಏಂಜಲ್ ಸಂಬಂಧ ಬಯಲಾಗಿದೆ. ಆರೋಪಿ ಮಂಜೀತ್ ಹಾಗೂ ಏಂಜಲ್ ನಡುವೆ ಮೊದಲಿಗೆ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಅಷ್ಟೇ ಅಲ್ಲದೇ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.