Asianet Suvarna News Asianet Suvarna News

ಸರ್ಕಾರಿ ಆಸ್ಪತ್ರೆಯ ಮೇಲೆಯೇ ಮೊಬೈಲ್ ಟವರ್! ಮೊಬೈಲ್ ರೇಡಿಯೇಶನ್'ಗಳಿಂದ ಗರ್ಭಿಣಿಯರಿಗೆ ತೊಂದರೆ

ಆ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕು. ಆದ್ರೆ ಸರ್ಕಾರಿ ಆಸ್ಪತ್ರೆ ಮೇಲೆಯ ಜೀವಕ್ಕೆ ಅಪಾಯವಿರುವ ಮೊಬೈಲ್ ಟವರ್ ಇದ್ದು, ಆಸ್ಪತ್ರೆಗೆ ದಾಖಲಾಗಬೇಕಾದ ರೋಗಿಗಳು ಟವರ್ ಸೂಸುವ ರೇಡಿಯೇಶನ್​'ನಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರದ ತಾಲೂಕ ಆಸ್ಪತ್ರೆ ಕಟ್ಟಡದ ಮೇಲೆ 12 ವರ್ಷಗಳಿಂದ ಮೊಬೈಲ್ ಟವರ್ ಇದ್ದು, ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ.

Mobile Tower On Govt Hospital

ಯಾದಗಿರಿ(ಮಾ.03): ಆ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕು. ಆದ್ರೆ ಸರ್ಕಾರಿ ಆಸ್ಪತ್ರೆ ಮೇಲೆಯ ಜೀವಕ್ಕೆ ಅಪಾಯವಿರುವ ಮೊಬೈಲ್ ಟವರ್ ಇದ್ದು, ಆಸ್ಪತ್ರೆಗೆ ದಾಖಲಾಗಬೇಕಾದ ರೋಗಿಗಳು ಟವರ್ ಸೂಸುವ ರೇಡಿಯೇಶನ್​'ನಿಂದ ಹಿಂದಕ್ಕೆ ಸರಿಯುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರದ ತಾಲೂಕ ಆಸ್ಪತ್ರೆ ಕಟ್ಟಡದ ಮೇಲೆ 12 ವರ್ಷಗಳಿಂದ ಮೊಬೈಲ್ ಟವರ್ ಇದ್ದು, ರೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ.

ಸರಕಾರಿ ಆಸ್ಪತ್ರೆ ಮೇಲೆ ಕಳೆದ 12 ವರ್ಷಗಳಿಂದ ಮೊಬೈಲ್ ಟವರ್  ಹಾಕಲಾಗಿದ್ದು, ಟವರ್ ವಿಕಿರಣದಿಂದ ರೋಗಿಗಳು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. 2005 ರಲ್ಲಿ ಅವಿಭಜಿತ ಕಲಬುರಗಿ ಜಿಲ್ಲಾ ವ್ಯಾಪ್ತಿಗೆ ಯಾದಗಿರಿ ಜಿಲ್ಲೆ ಮತ್ತು ಸುರಪುರ ತಾಲೂಕು ಒಳಪಟ್ಟಿದ್ದವು. ಹೀಗಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅವರು ಟವರ್​'ನ್ನು ಆಸ್ಪತ್ರೆ ಮೇಲೆ ಸ್ಥಾಪಿಸಲು ಅನುಮತಿ ನೀಡಿದರು. ಒಪ್ಪಂದ ಮುಗಿದರೂ  ಇನ್ನೂ  ಬಾಡಿಗೆ ಪಾವತಿಯಾಗಿಲ್ಲ. ಇದರ ಜೊತೆಗೆ ವಿಕರಣಗಳು ರೋಗಿಗಳನ್ನು  ಮತ್ತಷ್ಟು   ಹೈರಾಣಾಗಿಸುತ್ತಿದೆ.

ಯಾವುದೇ ಸರಕಾರಿ ಆಸ್ಪತ್ರೆ ಹಾಗೂ ಶಾಲಾ ಕಾಲೇಜ್ ಕಟ್ಟಡದ ಮೇಲೆ ಮೊಬೈಲ್ ಟವರ್ ಅಳವಡಿಸಬಾರದು. ಆದರೆ ಈ ಆಸ್ಪತ್ರೆ ಮೇಲೆ ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳೇ ಅನುಮತಿ ನೀಡಿ ಟವರ್ ಅಳವಡಿಸುವ ಕೆಲಸ ಮಾಡಿದ್ದಾರೆ. ತಾಲೂಕು ಆಸ್ಪತ್ರೆಗೆ ಗರ್ಭೀಣಿಯರು, ನವಜಾತ ಶಿಶುಗಳು ಹಾಗೂ ನೂರಾರು ರೋಗಿಗಳು ಆಗಮಿಸಿ ಚಿಕಿತ್ಸೆಗೆ ದಾಖಲಾಗುತ್ತಾರೆ. ರೋಗ ಗುಣಮುಖರಾಗಲು ದಾಖಲಾದ್ರೆ ಮೊಬೈಲ್ ಟವರ್ ಹೊರಸುಸುವ ವಿಕಿರಣಗಳಿಂದ ಅನಾರೋಗ್ಯದ ಭಯ ಜನರಿಗೆ ಕಾಡುತ್ತಿದೆ. ಮೊಬೈಲ್ ಟವರ್ ವಿಕಿರಣದಿಂದ ವಿವಿಧ ಕಾಯಿಲೆಗಳು ಬರುತ್ತವೆಂದು ವೈದ್ಯರ ಹೇಳಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗೆ  ಪತ್ರ ಬರೆದು ಒಂದು ವರ್ಷ ಗತಿಸಿದರೂ ಇದೂವರೆಗೆ ಯಾವುದೇ ಉತ್ತರ ಮಾತ್ರ ಬಂದಿಲ್ಲ. 10 ವರ್ಷಗಳ ಒಪ್ಪಂದ ಮುಗಿಯುವ ಜೊತೆ 12 ವರ್ಷದ ಬಾಡಿಗೆ ಹಣ ನೀಡದೆ ಟವರ್ ಹಾಗೆ ಇಟ್ಟಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬಾಡಿಗೆ ಹಣ ನೀಡುವ ಜೊತೆ ಈ ಡಂಜರ್ ಟವರ್ ತೆರವುಗೊಳಿಸಿ ರೋಗಿಗಳ ಆರೋಗ್ಯದ ಕಾಳಜಿ ತೊರಬೇಕಾಗಿದೆ.

Follow Us:
Download App:
  • android
  • ios