ಅಲಹಾಬಾದ್ (ಡಿ.20): ನೋಟು ಅಮಾನ್ಯ ಕ್ರಮದ ಬಳಿಕ ಗ್ರಾಹಕರ ಮತ್ತು ಬ್ಯಾಂಕ್ ಸಿಬ್ಬಂದಿಗಳ ನಡುವೆ ಮಾತಿನ ಜಗಳ ಸಾಮಾನ್ಯವಾಗಿದೆ. ಆದರೆ ಬ್ಯಾಂಕ್ ಸಿಬ್ಬಂದಿಯನ್ನೇ ಗುಂಪೊಂದು ಹೊರಗೆಳೆದು ಥಳಿಸಿದ ಘಟನೆ ಅಲಹಾಬಾದ್’ನಲ್ಲಿ ನಡೆದಿದೆ. ಗ್ರಾಹಕರ ಹಾಗೂ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದೆ. ಆ ಬಳಿಕ ಕುಪಿತಗೊಂಡ ಗುಂಪೊಂದು ಬ್ಯಾಂಕ್ ಉದ್ಯೋಗಿಗಳನ್ನು ಹೊರಗೆಳೆದು ಹಲ್ಲೆ ನಡೆಸಿರುವ ಘಟನೆ ವಿಡಿಯೋ’ನಲ್ಲಿ ಸೆರೆಯಾಗಿದೆ.