Asianet Suvarna News Asianet Suvarna News

ಶಬರಿಮಲೆ: ಮಹಿಳಾ ವರದಿಗಾರ್ತಿಯರ ಮೇಲೆ ಹಲ್ಲೆ!

ತೀವ್ರ ಸ್ವರುಪ ಪಡೆದುಕೊಳ್ಳುತ್ತಿರುವ ಶಬರಿಮಲೆ ವಿವಾದ! ಮಹಿಳಾ ಪತ್ರಕರ್ತರ ಮೇಲೂ ಹಲ್ಲೆಗೆ ಮುಂದಾದ ಪ್ರತಿಭಟನಾಕಾರರು! ಮಹಿಳಾ ವರದಿಗಾರ್ತಿಯರ ಮೇಲೆ ಹಲ್ಲೆ ಮಾಡಿದ ಗುಂಪು! ಮಹಿಳಾ ವರದಿಗಾರ್ತಿಯರ ವಾಹನಗಳ ಮೇಲೆ ಕಲ್ಲು ತೂರಾಟ

Mob Attacks Women Journalists Near Sabarimala
Author
Bengaluru, First Published Oct 17, 2018, 4:42 PM IST
  • Facebook
  • Twitter
  • Whatsapp

ತಿರುವನಂತಪುರ(ಅ.17): ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರತಿಭಟನಾಕಾರರು ನಿಳಕ್ಕಲ್ ನಲ್ಲಿ ಮಹಿಳೆಯರು ಮತ್ತು ವರದಿಗಾರರ ಮೇಲೆ ದಾಳಿ ನಡೆಸಿದ್ದಲ್ಲದೇ ಹಲವು ವಾಹನಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಿಪಬ್ಲಿಕ್ ಟಿವಿ, ಸಿಎನ್ಎನ್ ನ್ಯೂಸ್ 18, ಆಜ್ ತಕ್ ಮತ್ತು ನ್ಯೂಸ್ ಮಿನಿಟ್ ಮಹಿಳಾ ಪತ್ರಕರ್ತೆಯರ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಅಲ್ಲದೆ ಅವರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಅಯ್ಯಪ್ಪ ಹೆಸರಲ್ಲಿ ಘೋಷಣೆ ಕೂಗುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರು ಮಹಿಳೆಯರು ಮತ್ತು ಪತ್ರಕರ್ತೆಯರ ಮೇಲೆ ದಾಳಿ ನಡೆಸಿದ್ದು, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.

ನಿಳಕ್ಕಲ್ ಶಬರಿಮಲೆಯಿಂದ 20 ಕಿ.ಮೀ. ದೂರದಲ್ಲಿದ್ದು, ಪಂಪಾ ನದಿ ತಲುಪಲು ಇದೊಂದೇ ಮಾರ್ಗ. ಹೀಗಾಗಿ ಪ್ರತಿಭಟನಾಕಾರರು ಇಲ್ಲಿ ಜಮಾಯಿಸಿ ಮಹಿಳೆಯರು ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸದಂತೆ ತಡೆಯುತ್ತಿದ್ದಾರೆ.
 

Follow Us:
Download App:
  • android
  • ios