ಮುಂಬೈ(ಸೆ.23): ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ನಿಯೋಜಿತ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನಿ ಕಲಾವಿದರು ಕೂಡಲೇ ದೇಶವನ್ನ ತೊರೆಯಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಹೇಳಿದೆ. ಎಂಎನ್‍ಎಸ್‌‍ನ ಅಂಗ ಸಂಸ್ಥೆಯಾಗಿರುವ ಚಿತ್ರಪಟ್ ಸೇನಾದ ನಾಯಕ ಅಮೇಯ್ ಖೋಪ್ಕಾರ್, ಭಾರತದಲ್ಲಿರುವ ಪಾಕಿಸ್ತಾನದ ನಟರು ಸಾಧ್ಯವಾದಷ್ಟು ಬೇಗ ಭಾರತವನ್ನು ತೊರೆಯುವಂತೆ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಪಾಕಿಸ್ತಾನದ ನಟರಿಗೆ ದೇಶ ತೊರೆಯಲು 48 ಗಂಟೆಗಳ ಅವಕಾಶ ನೀಡಲಾಗಿದ್ದು, ಒಂದು ವೇಳೆ ಗಡುವು ಮುಕ್ತಾಯಗೊಂಡ ನಂತರವೂ ಭಾರತದಲ್ಲೇ ಉಳಿಯುವ ಪಾಕ್ ಕಲಾವಿದರನ್ನು ಎಂಎನ್‍ಎಸ್ ಭಾರತದಿಂದ ಹೊರದೂಡುವುದಾಗಿ ಎಚ್ಚರಿಕೆ ನೀಡಿದೆ. ಕಾಶ್ಮೀರದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 18 ಯೋಧರು ಮೃತಪಟ್ಟಿದ್ದು, ಈ ದಾಳಿಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಖಂಡಿಸಿವೆ.