ಮೋದಿ ಮುಂದೆ ನಿಂತು ಮಾತಾಡೋ ನಾಯಕ ಬೇಕು ಎಂದ ಮುರುಳಿ ಮನೋಹರ್ ಜೋಷಿ| 'ಪ್ರಧಾನಿ ಜೋತೆ ಧೈರ್ಯವಾಗಿ ವಿಷಯಾಧಾರಿತ ಚರ್ಚೆ ಮಾಡಬಲ್ಲ ನಾಯಕ ಬೇಕು'| ಜೈಪಾಲ್ ರೆಡ್ಡಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಮುರುಳಿ ಮನೋಹರ್ ಜೋಷಿ| 'ಮೋದಿ ಎದುರಿಗೆ ನಿಂತು ಅವರನ್ನು ಟೀಕಿಸುವ ನಾಯಕನ ಅವಶ್ಯಕತೆ ಇದೆ'|

ನವದೆಹಲಿ(ಸೆ.04): ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಧೈರ್ಯವಾಗಿ ನಿಂತು ವಿಷಯಾಧಾರಿತ ಚರ್ಚೆ ಮಾಡಬಲ್ಲ ನಾಯಕರ ಅವಶ್ಯಕತೆ ಇದೆ ಎಂದು ಬಿಜೆಪಿ ಹಿರಿಯ ನಾಯಕ ಮುರುಳು ಮನೋಹರ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿಗೆ ನಿಧನರಾದ ಕಾಂಗ್ರೆಸ್ ಹಿರಿಯ ನಾಯಕ ಜೈಪಾಲ್ ರೆಡ್ಡಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಜೋಷಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಘಟನಾವಳಿಗಳ ಕುರಿತು ಪಕ್ಷ ರಾಜಕಾರಣ ಮೀರಿದ ಚರ್ಚೆ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.

Scroll to load tweet…

ದೇಶಕ್ಕೆ ಪ್ರಧಾನಿ ಎದುರಿಗೆ ನಿಂತು ಅವರನ್ನು ಟೀಕಿಸುವ ಧೈರ್ಯವುಳ್ಳ ನಾಯಕನ ಅವಶ್ಯಕತೆ ಇದ್ದು, ಇಂತಹ ಮಾತುಗಳಿಂದ ಪ್ರಧಾನಿ ಸಂತುಷ್ಟರಾಗುತ್ತಾರೋ, ಕೋಪಗೊಳ್ಳುತ್ತಾರೋ ಎಂಬುದರ ಕುರಿತು ಚಿಂತಿಸದೇ ಧೈರ್ಯವಾಗಿ ಮಾತನಾಡುವ ನಾಯಕನ ಅವಶ್ಯಕತೆ ಇದೆ ಎಂದು ಜೋಷಿ ಹೇಳಿದ್ದಾರೆ.