ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲು ಸೆ.14ರಿಂದ  ರಾಜ್ಯವ್ಯಾಪಿ ಶಾಲಾ-ಕಾಲೇಜುಗಳ ಅನಿರ್ದಿಷ್ಟ ಬಂದ್ ನಡೆಸುವ ಮೂಲಕ ಸರ್ಕಾರದ ಕಣ್ತೆರೆಸಲು ನಿರ್ಧರಿಸಲಾಗಿತ್ತು. ಆದರೆ ಸೆ.15ರಂದು ಸಿಎಂ ಸಿದ್ದರಾಮಯ್ಯ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲಾ-ಕಾಲೇಜು ಬಂದ್ ಅನ್ನು ತಾತ್ಕಾಲಿಕ ಹಿಂಪಡೆಯಲಾಗಿದೆ.

ಬೆಂಗಳೂರು(ಸೆ.09): ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಶಿಕ್ಷಣ ಮತ್ತು ಪದವೀಧರ ಕ್ಷೇತ್ರ ದಿಂದ ಆಯ್ಕೆಯಾದ ಶಾಸಕರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟೆಂಬರ್ 15ರಂದು ಸಭೆ ಕರೆದಿದ್ದಾರೆ. ಆದಾಗ್ಯೂ, ಅಹೋರಾತ್ರಿ ಧರಣಿಯನ್ನು ಶಾಸಕರು ಹಿಂತೆಗೆದುಕೊಂಡಿಲ್ಲ. ಜತೆಗೆ, ಸೆ.15ರ ಸಭೆ ಫಲಪ್ರದವಾಗದಿದ್ದರೆ, ಸೆ.16ರಿಂದ ಶಾಲಾ ಕಾಲೇಜು ಬಂದ್ ಆರಂಭಿಸುವ ಎಚ್ಚರಿಕೆ ನೀಡಿದ್ದಾರೆ.

ಪ್ರಾಥಮಿಕ ಶಿಕ್ಷಣದಿಂದ ಪದವಿ ಶಿಕ್ಷಣದವರೆಗಿನ ಶಿಕ್ಷಣ ಕ್ಷೇತ್ರದ ಸಮಗ್ರ ಸಮಸ್ಯೆಗಳ ಇತ್ಯರ್ಥಕ್ಕೆ ಆಗ್ರಹಿಸಿ ಶಾಸಕರು ಧರಣಿ ನಡೆಸುತ್ತಿರುವ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸವರಾಜ ಹೊರಟ್ಟಿ ಈ ವಿಷಯ ತಿಳಿಸಿದರು. ಸರ್ಕಾರದ ಮೇಲೆ ಒತ್ತಡ ನಿರ್ಮಾಣ ಮಾಡಲು ಸೆ.14ರಿಂದ ರಾಜ್ಯವ್ಯಾಪಿ ಶಾಲಾ-ಕಾಲೇಜುಗಳ ಅನಿರ್ದಿಷ್ಟ ಬಂದ್ ನಡೆಸುವ ಮೂಲಕ ಸರ್ಕಾರದ ಕಣ್ತೆರೆಸಲು ನಿರ್ಧರಿಸಲಾಗಿತ್ತು. ಆದರೆ ಸೆ.15ರಂದು ಸಿಎಂ ಸಿದ್ದರಾಮಯ್ಯ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲಾ-ಕಾಲೇಜು ಬಂದ್ ಅನ್ನು ತಾತ್ಕಾಲಿಕ ಹಿಂಪಡೆಯಲಾಗಿದೆ. ಸೆ.15ರಂದು ನಡೆಯುವ ಸಭೆ ಫಲಪ್ರದವಾಗದಿದ್ದರೆ ಮರುದಿನದಿಂದಲೇ ಮುಷ್ಕರ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.