ವಿಧಾನಸಭೆ ಕಲಾಪದಲ್ಲಿ ಶಾಸಕರ ಗೈರು ಹಾಜರಾತಿ ಇಂದು ಕೂಡಾ ಮುಂದುವರೆದಿದೆ. ಕಾಂಗ್ರೆಸ್'ನಿಂದ 24, ಬಿಜೆಪಿಯಿಂದ 12, ಜೆಡಿಎಸ್'ನಿಂದ 03 ಶಾಸಕರು ಮಾತ್ರ ಕಲಾಪಕ್ಕೆ ಹಾಜರಾಗಿದ್ದಾರೆ.
ಬೆಳಗಾವಿ (ನ.20): ವಿಧಾನಸಭೆ ಕಲಾಪದಲ್ಲಿ ಶಾಸಕರ ಗೈರು ಹಾಜರಾತಿ ಇಂದು ಕೂಡಾ ಮುಂದುವರೆದಿದೆ. ಕಾಂಗ್ರೆಸ್'ನಿಂದ 24, ಬಿಜೆಪಿಯಿಂದ 12, ಜೆಡಿಎಸ್'ನಿಂದ 03 ಶಾಸಕರು ಮಾತ್ರ ಕಲಾಪಕ್ಕೆ ಹಾಜರಾಗಿದ್ದಾರೆ.
ಶಾಸಕರು, ಸಚಿವರ ಗೈರಿಗೆ ಸ್ಪೀಕರ್ ಕೋಳಿವಾಡ ಗರಂ ಆಗಿದ್ದಾರೆ. ಸದನಕ್ಕೆ ಬರಲು ಶಾಸಕರಿಗೇಕೆ ಉದಾಸೀನತೆ? ಕ್ಷೇತ್ರದಲ್ಲಿ ಸಮಸ್ಯೆ ಕೇಳಿ ಬಂದರೆ ಸದನದಲ್ಲಿ ಇದ್ದೇವೆ ಎನ್ನುತ್ತಾರೆ. ಆದರೆ ಇಲ್ಲಿ ಸದನಕ್ಕೆ ಕೂಡ ಚಕ್ಕರ್ ಹೊಡೆಯುತ್ತಾರೆ. ಇಲ್ಲಿಯೂ ಇಲ್ಲ, ಕ್ಷೇತ್ರದಲ್ಲೂ ಇಲ್ಲ, ಶಾಸಕರೇ ಎಲ್ಲಿದ್ದೀರಾ? ಎಂದು ಸ್ಪೀಕರ್ ಕೋಳಿವಾಡ ಫುಲ್ ಗರಂ ಆಗಿದ್ದಾರೆ.
