ಧಾರವಾಡ (ಜೂ. 24): ನಿನ್ನೆ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಎಲ್ಲೆಲ್ಲಿ ಹಾನಿಯಾಗಿದೆ ಎಂದು ಪರಿಶೀಲನೆ ಮಾಡಲು ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತೆರಳಿದ್ದರು.

ಈ ವೇಳೆ ಮಳೆ ನೀರಿನಿಂದ ಶೂ ಒದ್ದೆಯಾಗುತ್ತೆಂದು ರಸ್ತೆ ಮೇಲೆಯೇ ಬಿಚ್ಚಿ ಅದನ್ನು ತೆಗೆದಿಡಲು ಗನ್ ಮ್ಯಾನ್ ಗೆ ಹೇಳಿದ್ದಾರೆ. ಶಾಸಕರ ಈ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.