ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಆರಂಭವಾದ ‘ಸಾಮರಸ್ಯದ ಕಡೆ ಶಾಸಕರ ನÜಡೆ’ ಪಾದಯಾತ್ರೆಯ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೇಶವ ಸನಿಲ್‌ ಗಾಯಗೊಂಡಿದ್ದಾರೆ.

ಮೂಲ್ಕಿ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಆರಂಭವಾದ ‘ಸಾಮರಸ್ಯದ ಕಡೆ ಶಾಸಕರ ನÜಡೆ’ ಪಾದಯಾತ್ರೆಯ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೇಶವ ಸನಿಲ್‌ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಕಾಂಗ್ರೆಸ್‌ ಶಾಸಕ ಬಿ.ಎ. ಮೊಹಿಯುದ್ದೀನ್‌ ಬಾವಾ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಶಾಸಕ ಬಿ.ಎ. ಮೊಹಿಯುದ್ದೀನ್‌ ಬಾವಾ ನೇತೃತ್ವದಲ್ಲಿ ಮುಕ್ಕ ಜಂಕ್ಷನ್‌ ಬಳಿ ಆರಂಭಗೊಂಡ ಜಾಥಾವು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಕ್ಕದ ಶ್ರೀನಿವಾಸ್‌ ಕಾಲೇಜು ಎದುರುಗಡೆ ತೆರಳುತ್ತಿದ್ದಾಗ ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೇಶವ ಅವರಿಗೆ ಡಿಕ್ಕಿ ಹೊಡೆದಿದೆ.

ಕೇಶವ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಹೆಚ್ಚಿನ ಅನಾಹುತವಾಗಿಲ್ಲ. ಅಲ್ಲೇ ಇದ್ದ ಬಾವಾ ಸ್ವಲ್ಪದರಲ್ಲೇ ಪಾರಾದರು. ಬಳಿಕ ಪಾದಯಾತ್ರೆ ಮುಂದೆ ಸಾಗಿದೆ.