Asianet Suvarna News Asianet Suvarna News

ಶಾಲಾ ಕಟ್ಟಡ ಕೆಡವಲು ಮುಂದಾದರಾ ಶಾಸಕರು!: ಶಾಸಕರ ಕ್ರಮಕ್ಕೆ ಶಾಲಾ ಆಡಳಿತ ಮಂಡಳಿ ವಿರೋಧ

ಮಂಗಳೂರಿನ ಶಾಲೆಯೊಂದಕ್ಕೆ ಸೇರಿದ ಬೃಹತ್ ಮೈದಾನ ಈಗ ವಿವಾದಕ್ಕೀಡಾಗಿದೆ. ಸುರತ್ಕಲ್ ಪ್ರದೇಶದ ಕಾಟಿಪಳ್ಳ ಸರ್ಕಾರಿ ಶಾಲೆಯ ಬಯಲಿನಲ್ಲಿ ಮೈದಾನ ನಿರ್ಮಾಣಕ್ಕೆ ಶಾಲಾಭಿವೃದ್ಧಿ ಮಂಡಳಿ ಅಪಸ್ವರ ಎತ್ತಿದೆ. ಈ ಮೈದಾನದಲ್ಲಿ ಈಜು ಕೊಳ, ಕ್ರೀಡಾಂಗಣ ಇರುವ ಸುಸಜ್ಜಿತ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಆದರೆ ಹಳೇ ಶಾಲೆ ಕೆಡವಿ ಮೈದಾನ ಹಾಗೂ ಈಜುಕೊಳ ನಿರ್ಮಾಣಕ್ಕೆ ಮುಂದಾಗಿರುವ ಮಂಗಳೂರಿನ ಶಾಸಕರೊಬ್ಬರ ವಿರುದ್ಧ ವಿರೋಧ ವ್ಯಕ್ತವಾಗಿದೆ.

MLA Is Getting Ready T Demolish The School Buliding

ಮಂಗಳೂರು(ಫೆ.23): ಮಂಗಳೂರಿನ ಶಾಲೆಯೊಂದಕ್ಕೆ ಸೇರಿದ ಬೃಹತ್ ಮೈದಾನ ಈಗ ವಿವಾದಕ್ಕೀಡಾಗಿದೆ. ಸುರತ್ಕಲ್ ಪ್ರದೇಶದ ಕಾಟಿಪಳ್ಳ ಸರ್ಕಾರಿ ಶಾಲೆಯ ಬಯಲಿನಲ್ಲಿ ಮೈದಾನ ನಿರ್ಮಾಣಕ್ಕೆ ಶಾಲಾಭಿವೃದ್ಧಿ ಮಂಡಳಿ ಅಪಸ್ವರ ಎತ್ತಿದೆ. ಈ ಮೈದಾನದಲ್ಲಿ ಈಜು ಕೊಳ, ಕ್ರೀಡಾಂಗಣ ಇರುವ ಸುಸಜ್ಜಿತ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಆದರೆ ಹಳೇ ಶಾಲೆ ಕೆಡವಿ ಮೈದಾನ ಹಾಗೂ ಈಜುಕೊಳ ನಿರ್ಮಾಣಕ್ಕೆ ಮುಂದಾಗಿರುವ ಮಂಗಳೂರಿನ ಶಾಸಕರೊಬ್ಬರ ವಿರುದ್ಧ ವಿರೋಧ ವ್ಯಕ್ತವಾಗಿದೆ.

ಸುಮಾರು 40 ವರ್ಷ ಹಳೆಯ ಮಂಗಳೂರಿನ ಸುರತ್ಕಲ್ ಪ್ರದೇಶದ ಕಾಟಿಪಳ್ಳ ಸರ್ಕಾರಿ ಶಾಲೆಗೆ ಬೃಹತ್ ಮೈದಾನ ಇದೆ. ಈ ಮೈದಾನ ಬಳಸಿ ಸುಸಜ್ಜಿತ ಕ್ರೀಡಾ ಕಾಂಪ್ಲೆಕ್ಸ್ ಮಾಡುವ ಯೋಜನೆ ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ಅವರದ್ದು ಆದರೆ, ಶಾಸಕರ ಯೋಜನೆಗೆ ಶಾಲಾಭಿವೃದ್ಧಿ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಕ್ಕದಲ್ಲೇ ಇರುವ ಮೈದಾನವನ್ನು ಬಿಟ್ಟು ಈ ಜಮೀನಿನ ಮೇಲೆ ಕೆಂಗಣ್ಣು ಬೀರಿರುವುದು ಸರಿಯಲ್ಲ. ಶಾಲಾ ಕಟ್ಟಡವನ್ನು ಕೆಡವಬಾರದು ಎಂದು ಶಾಲಾಭಿವೃದ್ಧಿ ಮಂಡಳಿ ಹೇಳಿದೆ.

ಆದರೆ, ಶಾಲೆಗೆ ಪ್ರತ್ಯೇಕ ಸುಸಜ್ಜಿತ ಕಟ್ಟಡ ಕಟ್ಟಿದ ಬಳಿಕ ಇಲ್ಲಿ ಮೈದಾನ, ಈಜು ಕೊಳ, ಬ್ಯಾಡ್ಮಿಂಟನ್ ಮತ್ತು ಶಟಲ್ ಕೋರ್ಟ್ ಇರುವ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸುವುದಾಗಿ ಶಾಸಕ ಮೊಯ್ದೀನ್ ಬಾವಾ ಭರವಸೆ ನೀಡಿದ್ದಾರೆ.

ಒಟ್ಟಾರೆ, ಶಾಸಕರು ಇತ್ತ ಜನರ ಒಳಿತಿಗಾಗಿ ಇದನ್ನೆಲ್ಲ ಮಾಡುತ್ತಿದ್ದೀನಿ ಎನ್ನುತ್ತಿದ್ರೆ, ಅತ್ತ, ಈ ಯೋಜನೆ ಬೇಡ ಅನ್ನುತ್ತಿದ್ದಾರೆ ಸ್ಥಳೀಯರು.

Latest Videos
Follow Us:
Download App:
  • android
  • ios