ಪುತ್ರ ನಲಪಾಡ್ ಪುಂಡಾಟದಿಂದ ಹ್ಯಾರಿಸ್’ಗೆ ಕೈ ತಪ್ಪಲಿದೆಯಾ ಟಿಕೆಟ್

First Published 5, Mar 2018, 11:07 AM IST
MLA Haris May Get Congress Ticket
Highlights

ಕಳೆದ ಎರಡು ಸಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿರುವ ಎನ್.ಎ. ಹ್ಯಾರಿಸ್ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ. ಆದರೆ ಪುತ್ರ ನಲಪಾಡ್ ವಿವಾದದಲ್ಲಿ ಟಿಕೆಟ್ ಕೈ ತಪ್ಪುವ  ಸಾಧ್ಯತೆಯೂ ಇದೆ ಎಂಬ ಮಾತು ಕೇಳಿಬರುತ್ತಿದೆ.

ಬೆಂಗಳೂರು : ಕಳೆದ ಎರಡು ಸಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿರುವ ಎನ್.ಎ. ಹ್ಯಾರಿಸ್ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ. ಆದರೆ ಪುತ್ರ ನಲಪಾಡ್ ವಿವಾದದಲ್ಲಿ ಟಿಕೆಟ್ ಕೈ ತಪ್ಪುವ  ಸಾಧ್ಯತೆಯೂ ಇದೆ ಎಂಬ ಮಾತು ಕೇಳಿಬರುತ್ತಿದೆ. ಟಿಕೆಟ್ ತಪ್ಪುವಂತಹ ಗಂಭೀರ ಆರೋಪ ಹ್ಯಾರಿಸ್ ಎದುರಿಸುತ್ತಿಲ್ಲ. ಜತೆಗೆ ಕ್ಷೇತ್ರದಲ್ಲಿ ಹ್ಯಾರಿಸ್ ಪ್ರಭಾವ ಹೊಂದಿರುವ ಕಾರಣ ಟಿಕೆಟ್ ಅಂತಿಮಗೊಳಿಸುವ ಆಧ್ಯತೆಯೇ ಹೆಚ್ಚಿದೆ.

ಎಲ್ಲವೂ ನಲಪಾಡ್ ಹಲ್ಲೆ ಪ್ರಕರಣದ ಮುಂದಿನ ಸ್ವರೂಪವನ್ನೇ ಅವಲಂಬಿಸಿದೆ. ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣವನ್ನೇ ಮುಂದಿಟ್ಟುಕೊಂಡು ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದೆ. ಪಕ್ಷದ ಮುಖಂಡ ಶ್ರೀಧರ್ ರೆಡ್ಡಿ, ಜೆಡಿಎಸ್‌ನಿಂದ ವಲಸೆ ಬಂದಿರುವ ಬಿಬಿಎಂಪಿ ಮಾಜಿ ಸದಸ್ಯ ವಾಸುದೇವಮೂರ್ತಿ ಮತ್ತಿತರರ ಹೆಸರುಗಳು ಕೇಳಿಬರುತ್ತಿವೆ. ಸಮರ್ಥರಿಗಾಗಿ ಪಕ್ಷ ಹುಡುಕಾಟವನ್ನೂ ನಡೆಸಿದೆ. ಜೆಡಿಎಸ್‌ನಲ್ಲಿ ಸದ್ಯಕ್ಕೆ ಪ್ರಬಲ ಅಭ್ಯರ್ಥಿಗಳ ಕೊರತೆ ಕಂಡು ಬರುತ್ತಿದೆ.

loader