ವೈದ್ಯಕೀಯ ವರದಿ ಬಿಡುಗಡೆ ಮಾಡಿರುವ ಹ್ಯಾರಿಸ್ ನಡವಳಿಕೆಗೆ ಮಾಜಿ ಸಚಿವ ಹಾಗೂ ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣ ಫೇಸ್‌'ಬುಕ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹ್ಯಾರಿಸ್ ಅವರು ಫೇಸ್‌'ಬುಕ್‌'ನಲ್ಲಿ ‘ಲೋಕನಾಥನ್ ಅವರ ಪುತ್ರ ವಿದ್ವತ್ ಗುಣಮುಖನಾಗಿದ್ದು, ದೇವರಿಗೆ ನಾನು ಆಭಾರಿಯಾಗಿದ್ದೇನೆ. ವಿದ್ವತ್ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದಾರೆ. ವಿದ್ವತ್ ಪರಿಪೂರ್ಣವಾಗಿ ಚೇತರಿಸಿಕೊಂಡಿರುವ ಬಗ್ಗೆ ಅವರ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿದ್ವತ್ ಹಾಗೂ ಅವರ ಕುಟುಂಬದವರಿಗೆ ದೇವರು ಒಳ್ಳೆಯದನ್ನು ಮಾಡಿ ಸಂತೋಷವನ್ನು ನೀಡಲಿ. ವಿದ್ವತ್ ಶೀಘ್ರ ಗುಣಮುಖರಾಗಲು ಶ್ರಮಿಸಿದ ಮಲ್ಯ ಆಸ್ಪತ್ರೆ ವೈದ್ಯರಿಗೆ ಧನ್ಯವಾದ. ನಿಮ್ಮ ಗಮನಕ್ಕೆ ವೈದ್ಯಕೀಯ ಸಾರಾಂಶ ಪತ್ರವನ್ನು ಅಪ್‌'ಲೋಡ್ ಮಾಡಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು(ಮೇ.07): ಮೊಹಮ್ಮದ್ ನಲಪಾಡ್ ಗ್ಯಾಂಗ್‌'ನಿಂದ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ವತ್‌'ನ ವೈದ್ಯಕೀಯ ವರದಿಯ ಪತ್ರವನ್ನು ಶಾಸಕ ಎನ್.ಎ.ಹ್ಯಾರಿಸ್ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ನಲ್ಲಿ ಬಿಡುಗಡೆ ಮಾಡುವ ಮೂಲಕ ಇದೀಗ ವಿವಾದಕ್ಕೀಡಾಗಿದ್ದಾರೆ.

ವೈದ್ಯಕೀಯ ವರದಿ ಬಿಡುಗಡೆ ಮಾಡಿರುವ ಹ್ಯಾರಿಸ್ ನಡವಳಿಕೆಗೆ ಮಾಜಿ ಸಚಿವ ಹಾಗೂ ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣ ಫೇಸ್‌'ಬುಕ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹ್ಯಾರಿಸ್ ಅವರು ಫೇಸ್‌'ಬುಕ್‌'ನಲ್ಲಿ ‘ಲೋಕನಾಥನ್ ಅವರ ಪುತ್ರ ವಿದ್ವತ್ ಗುಣಮುಖನಾಗಿದ್ದು, ದೇವರಿಗೆ ನಾನು ಆಭಾರಿಯಾಗಿದ್ದೇನೆ. ವಿದ್ವತ್ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ತೆರಳಿದ್ದಾರೆ. ವಿದ್ವತ್ ಪರಿಪೂರ್ಣವಾಗಿ ಚೇತರಿಸಿಕೊಂಡಿರುವ ಬಗ್ಗೆ ಅವರ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿದ್ವತ್ ಹಾಗೂ ಅವರ ಕುಟುಂಬದವರಿಗೆ ದೇವರು ಒಳ್ಳೆಯದನ್ನು ಮಾಡಿ ಸಂತೋಷವನ್ನು ನೀಡಲಿ. ವಿದ್ವತ್ ಶೀಘ್ರ ಗುಣಮುಖರಾಗಲು ಶ್ರಮಿಸಿದ ಮಲ್ಯ ಆಸ್ಪತ್ರೆ ವೈದ್ಯರಿಗೆ ಧನ್ಯವಾದ. ನಿಮ್ಮ ಗಮನಕ್ಕೆ ವೈದ್ಯಕೀಯ ಸಾರಾಂಶ ಪತ್ರವನ್ನು ಅಪ್‌'ಲೋಡ್ ಮಾಡಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸುರೇಶ್ ಕುಮಾರ್ ‘ಇದೊಂದು ಅನಗತ್ಯವಾದ ಪ್ರಹಸನ. ಶಾಂತಿನಗರದ ಶಾಸಕ ಹ್ಯಾರಿಸ್, ವಿದ್ವತ್ ಆಸ್ಪತ್ರೆಯಿಂದ ಬಿಡುಗಡೆಯಾದ ವೈದ್ಯಕೀಯ ಸಾರಾಂಶದ ಪತ್ರವನ್ನು ಬಿಡುಗಡೆ ಮಾಡಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಸಾರಾಂಶ ಪತ್ರ ಬಿಡುಗಡೆ ಮಾಡಲು ಹ್ಯಾರಿಸ್ ಯಾರು? ಇದರ ಉದ್ದೇಶ ಏನು? ಇಡೀ ಹೇಳಿಕೆಯಲ್ಲಿ ತನ್ನ ಪುತ್ರನ ಘನಂದಾರಿ ಕಾರ್ಯದ ಬಗ್ಗೆ ಲವಲೇಶ ಪಶ್ಚಾತಾಪದ ಸುಳಿವೂ ಇಲ್ಲವಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಮ್ಮೆ ತನ್ನ ಮಗನನ್ನು ರಕ್ಷಿಸಲು ಯಾರ ಅನುಕಂಪ ಗಳಿಸುವ ಪ್ರಯತ್ನವಿದು? ವಿಧಾನಸಭಾ ಚುನಾವಣೆಯ ಮೊದಲ ಪ್ರಚಾರ ಪತ್ರವೇ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಮಲ್ಯ ಆಸ್ಪತ್ರೆ ವೈದ್ಯರಿಗೆ ಹ್ಯಾರಿಸ್ ಧನ್ಯವಾದ ?

ಬೆಂಗಳೂರು: ಇತ್ತೀಚಿಗೆ ತಮ್ಮ ಪುತ್ರ ಮತ್ತವನ ಸಹಚರರ ಗೂಂಡಾಗಿರಿಗೆ ಸಿಲುಕಿ ಹಲ್ಲೆಗೊಳಗಾಗಿದ್ದ ವಿದ್ವತ್ ಚೇತರಿಸಿಕೊಂಡ ಬೆನ್ನಲ್ಲೇ ಶಾಂತಿನಗರ ಶಾಸಕ ಹ್ಯಾರಿಸ್, ಗಾಯಾಳುವಿಗೆ ಚಿಕಿತ್ಸೆ ನೀಡಿದ ಮಲ್ಯ ಆಸ್ಪತ್ರೆ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ.

ವಿದ್ವತ್ ಸಂಪೂರ್ಣ ಗುಣಮುಖವಾಗಿರುವ ಸಂಗತಿ ತಿಳಿದು ಸಂತೋಷವಾಯಿತು. ಆತನ ಆರೋಗ್ಯ ಸುಧಾರಣೆಗೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೆ. ಆತನಿಗೆ ಸೂಕ್ತವಾಗಿ ಚಿಕಿತ್ಸೆ ನೀಡಿ ಆರೈಕೆ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಶಾಸಕ ಹ್ಯಾರಿಸ್ ತಿಳಿಸಿದ್ದಾರೆ. ಇತ್ತೀಚಿಗೆ ಯುಬಿ ಸಿಟಿ ಫರ್ಜಿ ಕೆಫೆಯಲ್ಲಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರ ನಡೆಸಿದ ದಬ್ಬಾಳಿಕೆಗೆ ವಿದ್ವತ್ ತುತ್ತಾಗಿದ್ದರು. ಬಳಿಕ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಭಾನುವಾರ ರಾತ್ರಿ ಬಿಡುಗಡೆಯಾಗಿದ್ದರು.