ನಿಮ್ಮ ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಯಾವ ಅಧಿಕಾರ ಕೊಟ್ಟಿದ್ದೀರಿ. ಬೇರೆ ಸಮುದಾಯಗಳು ಬೇಡ ಕುರುಬ ಸಮುದಾಯದ ಬೀದಿಗಳಿಗೆ ರಸ್ತೆ ರಿಪೇರಿ ಮಾಡಿಸಿದ್ದೀರಾ ?

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದರು.

Add Asianetnews Kannada as a Preferred SourcegooglePreferred

ನೀವು ಎಲ್ಲಿಯ ಸಮಾಜವಾದಿ, ನೀವು ಮೂಕಾಂಬಿಕಾ ದೇವಸ್ಥಾನದಲ್ಲಿ ಶರ್ಟ್​ ಬಿಚ್ಚಿ ಹೋಮ ಮಾಡಿಲ್ಲವೇ? ತಿರುಪತಿ ದೇವಾಲಯಕ್ಕೆ ಹೋಗಿಲ್ವಾ.. ದಸರಾ ಮಹೋತ್ಸವದ ಉದ್ಘಾಟನೆ ಸಂದರ್ಭದಲ್ಲಿ ಪ್ರೊ.ನಿಸಾರ್ ಅಹಮದ್ ಅವರ ಜತೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿ ಕೂರುತ್ತೀರಿ ಎಂದು ಪ್ರಶ್ನೆ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ನೀವು ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದೀರಿ. ನಿಮ್ಮ ಗೆಲುವಿಗೆ ಶ್ರಮಿಸಿದ ಮುಖಂಡರಿಗೆ ಯಾವ ಅಧಿಕಾರ ಕೊಟ್ಟಿದ್ದೀರಿ. ಬೇರೆ ಸಮುದಾಯಗಳು ಬೇಡ ಕುರುಬ ಸಮುದಾಯದ ಬೀದಿಗಳಿಗೆ ರಸ್ತೆ ರಿಪೇರಿ ಮಾಡಿಸಿದ್ದೀರಾ ? ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಶ್ನೆಗಳ ಮಳೆಗೆರೆದಿದ್ದಾರೆ. ನಾನು ಕೂಡ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಚುನಾವಣೆ ಎದುರಿಸುವುದಾಗಿ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.