Asianet Suvarna News Asianet Suvarna News

ಅಕ್ರಮ ಮರಳು ದಂಧೆ ಲಾರಿ ಹಿಡಿದುಕೊಟ್ಟ ಶಾಸಕ

ಅಕ್ರಮ ಮರಳು ದಂಧೆ ವಿರುದ್ಧ ಶಾಸಕನ ಸೀಕ್ರೆಟ್‌ ಆಪರೇಷನ್‌ |  ಹೊಂಚು ಹಾಕಿ ಕಾದು ಕುಳಿತು ಲಾರಿಗೆ ತಡೆ |  ಬಳಿಕ ಪೊಲೀಸರಿಗೆ ಒಪ್ಪಿಸಿದ ನಾಗಠಾಣಾ ಶಾಸಕ
 

MLA Devanand Chauhan sting operation on illegal sand mafia
Author
Bengaluru, First Published Jan 16, 2019, 9:38 AM IST
  • Facebook
  • Twitter
  • Whatsapp

ವಿಜಯಪುರ (ಜ. 16):  ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ವಾಹನವನ್ನು ಶಾಸಕರೊಬ್ಬರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಇಲ್ಲಿನ ವಿಜಯಪುರ-ಸೊಲ್ಲಾಪುರ ರಾ.ಹೆ. 50ರಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ನಾಗಠಾಣ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ, ಮರಳು ಸಾಗಣೆ ವಾಹನವನ್ನು ತಡೆದ ಜನಪ್ರತಿನಿಧಿ.

ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ಕುರಿತು ನಿಖರ ಮಾಹಿತಿ ಪಡೆದ ಶಾಸಕರು, ದಂಧೆಕೋರರನ್ನು ಸಾಕ್ಷಿ ಸಮೇತ ಪೊಲೀಸರಿಗೊಪ್ಪಿಸಲು ಯೋಜನೆ ರೂಪಿಸಿದ್ದರು. ಅದರಂತೆ ತಮ್ಮ ಬೆಂಬಲಿಗರ ಜತೆಗೂಡಿ ಸೋಮವಾರ ರಾತ್ರಿ ಇಲ್ಲಿಗೆ ಸಮೀಪದ ರಾ.ಹೆ. ಪಕ್ಕದ ಹೊಲವೊಂದರಲ್ಲಿ ಕಾದು ಕುಳಿತಿದ್ದರು.

ಈ ವೇಳೆ ಅದೇ ಮಾರ್ಗದಲ್ಲಿ ಆಗಮಿಸಿದ ಅಕ್ರಮವಾಗಿ ಮರಳು ತುಂಬಿಸಿಕೊಂಡು ಸಾಗುತ್ತಿದ್ದ ವಾಹನವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಚಾಲಕ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ವಿಜಯಪುರ ಆದರ್ಶನಗರ ಠಾಣಾ ಪೊಲೀಸರು ಮರಳು ತುಂಬಿದ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಮರಳು ತಡೆಗೆ ಸಂಕಲ್ಪ:

ಕಳೆದ ಒಂದು ವಾರದ ಹಿಂದೆ ಇದೇ ರೀತಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ವೊಂದನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದೆ ಎಂದು ಶಾಸಕ ಚವ್ಹಾಣ ಈ ವೇಳೆ ಪ್ರತಿಕ್ರಿಯಿಸಿದ್ದಾರೆ.

ಅಕ್ರಮ ಮರಳು ಸಾಗಣೆ ತಡೆಗೆ ಸಂಕಲ್ಪ ಮಾಡಿದ್ದು, ಬರುವ ದಿನಗಳಲ್ಲಿಯೂ ತಾವು ಅಕ್ರಮ ಮರಳು ಸಾಗಣೆ ವಾಹನ ತಡೆದು ಪೊಲೀಸರಿಗೆ ಒಪ್ಪಿಸುವ ಕೆಲಸ ಮುಂದುವರಿಸುತ್ತೇನೆ ಎಂದು ಶಾಸಕರು ಹೇಳಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆಯಿಂದ ಮೊದಲಿನಿಂದಲೂ ರೋಸಿ ಹೋಗಿದ್ದೆ. ಈಗ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಣೆ ತಡೆಯಲು ಶಾಸಕತ್ವದ ಅಧಿಕಾರವಿದೆ. ಈ ಅಧಿಕಾರವನ್ನು ಜನರ ಸಲುವಾಗಿ ಸದುಪಯೋಗ ಮಾಡಿಕೊಂಡು ಅಕ್ರಮಕ್ಕೆ ಪರಿಣಾಮಕಾರಿಯಾಗಿ ತಡೆಯೊಡ್ಡುವೆ. ಈ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

Follow Us:
Download App:
  • android
  • ios