ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗೆ ಕಾಳಜಿಯಿಲ್ಲ. ಕುಮಾರಸ್ವಾಮಿ ಸಿಎಂ ಆಗೋದಾದ್ರೆ ಎಲ್ಲಾ 224 ಕ್ಷೇತ್ರ ಬಿಟ್ಟು ದೇವೇಗೌಡರು ಚಾಮರಾಜಪೇಟೆ ಕ್ಷೇತ್ರಕ್ಕೆ ಬರಲಿ. ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲ್ಲ.
ಬೆಂಗಳೂರು(ಜು.22): ದೇವೇಗೌಡರ ಬಗ್ಗೆ ತುಂಬಾ ಗೌರವವಿದೆ. ಆದರೆ, ಈ ರೀತಿ ರಾಜಕೀಯ ಮಾಡ್ತಾರೆ ಅಂತಾ ಅಂದ್ಕೊಂಡಿರಲಿಲ್ಲಾ. ನಾನು ಯಾವತ್ತು ಕೀಳುಮಟ್ಟದ ರಾಜಕಾರಣ ಮಾಡಿಲ್ಲ
ಜಮೀರ್ ಅಹ್ಮದ್ ಮುಖ ನೋಡಿ ಚುನಾವಣೆಯಲ್ಲಿ ಜೆಡಿಎಸ್'ಗೆ ಮತ ಹಾಕಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಜನ ನನ್ನನ್ನು ಇಷ್ಟಪಡುತ್ತಾರೆ ದೇವೇಗೌಡರನ್ನಲ್ಲ. ಎಲ್ಲ ಸಮುದಾಯದ ಜನರು ಜಮೀರ್ ನಮ್ಮ ಮನೆಯ ಮಗ ಎಂದು ಭಾವಿಸಿದ್ದಾರೆ' ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಮಾಜಿ ಪ್ರಧಾನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗೆ ಕಾಳಜಿಯಿಲ್ಲ. ಕುಮಾರಸ್ವಾಮಿ ಸಿಎಂ ಆಗೋದಾದ್ರೆ ಎಲ್ಲಾ 224 ಕ್ಷೇತ್ರ ಬಿಟ್ಟು ದೇವೇಗೌಡರು ಚಾಮರಾಜಪೇಟೆ ಕ್ಷೇತ್ರಕ್ಕೆ ಬರಲಿ. ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲ್ಲ. ಗೆಲ್ಲುವುದಿರಲಿ ಕ್ಷೇತ್ರದಲ್ಲಿ ಠೇವಣಿಯೂ ಸಿಗಲ್ಲ. ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ ಜಮೀರ್ ನೇರ ಸವಾಲು ಹಾಕಿದರು.
ನಿನ್ನೆ ದೇವೇಗೌಡರು ಹೇಳಿದ ಮಾತು ಬೇಸರ ತರಿಸಿದೆ.ನನ್ನ ಕ್ಣೇತ್ರದಲ್ಲಿ ಸಮಾವೇಶ ನಡೆಸಲು ಒಂದು ತಿಂಗಳಿನಿಂದ ಪ್ರಯತ್ನಪಟ್ಟಿದ್ದರು. ಆದರೆ, ನಿನ್ನೆ ನಡೆದ ಸಮಾವೇಶದಲ್ಲಿ ಎಷ್ಟು ಜನ ಬಂದಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ನನ್ನ ಸ್ವಂತ ಬಲದಿಂದ ಗೆದ್ದಿದ್ದೇನೆ. ಜನರೇ ನನ್ನನ್ನು ಆಯ್ಕೆ ಮಾಡಿದ್ದಾರೆ' ಎಂದು ಮುಂದಿನ ಚುನಾವಣೆಯಲ್ಲಿ ತಾವೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
(ಸಂಗ್ರಹ ಚಿತ್ರ)
