ಐಜ್ವಾಲ್‌ (ಸೆ. 04): ಶಾಲೆಗಳಲ್ಲಿ ಶಿಸ್ತು, ಶಾಂತಿ, ಸ್ವಚ್ಛತೆ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸುವುದು ಗೊತ್ತು. ಆದರೆ ಮಿಜೋರಾಂನ ಹೈಸ್ಕೂಲ್‌ ಮತ್ತು ಸೆಕೆಂಡರಿ ಹೈಸ್ಕೂಲ್‌ನ ವಿದ್ಯಾರ್ಥಿಗಳು, ನಾವು ನಮ್ಮ ಬುಡಕಟ್ಟು ಸಮುದಾಯ ಹೊರತೂ, ಹೊರರಾಜ್ಯದ ಯಾವುದೇ ವ್ಯಕ್ತಿಯನ್ನು ಮದುವೆಯಾಗುವುದಿಲ್ಲ ಎಂಬ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.

ಹೌದು, ಮಿಜೋರಾಂನ ಪ್ರಭಾವಿ ‘ಮಿಜೋ ಝಿರ್ಲಾಯ್‌ ಪಾಲ್‌’ ಎಂಬ ವಿದ್ಯಾರ್ಥಿ ಸಂಘಟನೆ ವಿವಿಧ ಭಾಗಗಳಲ್ಲಿರುವ ಪ್ರೌಢ ಶಾಲೆ ಹಾಗೂ ಪಿಯುಸಿ ಮಟ್ಟದ ವಿದ್ಯಾರ್ಥಿಗಳಿಂದ ತಮ್ಮ ಹೊರಗಿನ ಜನಾಂಗದವರನ್ನು ವಿವಾಹವಾಗುವುದಿಲ್ಲ ಎಂಬ ವಿಚಿತ್ರ ಪ್ರತಿಜ್ಞೆಯೊಂದನ್ನು ಮಾಡಿಸಿಕೊಂಡಿದೆ.

ತಮ್ಮದು ಸಣ್ಣ ಬುಡಕಟ್ಟು ಜನಾಂಗ. ಒಂದು ವೇಳೆ ನಮ್ಮ ಸಮುದಾಯದವರು ಬೇರೆ ಸಮುದಾಯದೊಂದಿಗೆ ವಿವಾಹ ಮಾಡಿಕೊಳ್ಳುತ್ತಾ ಹೋದಲ್ಲಿ ನಮ್ಮ ಸಂಪ್ರದಾಯ, ಇತಿಹಾಸ ಎಲ್ಲವೂ ನಾಶವಾಗುತ್ತದೆ. ಹೀಗಾಗಿ ಅದನ್ನು ಉಳಿಸಿಕೊಳ್ಳಲು ಹಲವು ವರ್ಷಗಳಿಂದ ಶಾಲೆಗಳಲ್ಲೇ ಮಕ್ಕಳಿಗೆ ಇಂಥ ವಿಧಿ ಬೋಧಿಸುತ್ತಾ ಬರುತ್ತಿದ್ದೇವೆ ಎಂದು ಸಂಘಟನೆ ಹೇಳಿದೆ.