Asianet Suvarna News Asianet Suvarna News

ಗುಪ್ತಚರ ಉಪಗ್ರಹ ಹೊಡೆದುರುಳಿಸುವ ಸಾಮರ್ಥ್ಯ: ಅಂತರಿಕ್ಷ ಸಮರಕ್ಕೆ ಸಿದ್ಧ!

ಅಂತರಿಕ್ಷ ಸಮರಕ್ಕೆ ಸಿದ್ಧಗೊಂಡ ಭಾರತ| ಭಾರತದ ಅಂತರಿಕ್ಷ ಸುರಕ್ಷತೆಗೆ ಹೊಸ ಭಾಷ್ಯ| ಲೋ ಅರ್ಥ್ ಸ್ಯಾಟ್ ಲೈಟ್ ಹೊಡೆದುರುಳಿಸುವ ಸಾಮರ್ಥ್ಯ| ಗುಪ್ತಚರ ಉಪಗ್ರಹ ನಾಶಗೊಳಿಸುವ ಸಾಮರ್ಥ್ಯ ಪಡೆದ ಭಾರತ| ಬಾಹ್ಯಾಕಾಶ ಉಪಗ್ರಹ ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದ ವಿಶ್ವದ ನಾಲ್ಕನೇ ದೇಶ

Mission Shakti  India builds anti-satellite weapon A SAT
Author
Bengaluru, First Published Mar 27, 2019, 12:47 PM IST

ನವದೆಹಲಿ(ಮಾ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಅಂತರೀಕ್ಷ ವಿಜ್ಞಾನಿಗಳು. ಲೋ ಅರ್ಥ್ ಆರ್ಬಿಟ್ ಕ್ಷೇತ್ರದಲ್ಲಿ ಕೆಳ ಸ್ತರದ ಉಪಗ್ರಹವೊಂದನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ.

ಮಿಶನ್ ಶಕ್ತಿ ಹೆಸರಲ್ಲಿ ಅಂತರೀಕ್ಷದಲ್ಲಿ 3 ಸಾವಿರ ಕಿ.ಮೀ. ದೂರದಲ್ಲಿ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಕೇವಲ 3 ನಿಮಿಷದಲ್ಲಿ ಕೆಳ ಸ್ತರದ ಉಪಗ್ರಹ ಹೊಡೆದುರುಳಿಸುವಲ್ಲಿ ಸಫಲತೆ ಸಾಧಿಸಲಾಗಿದೆ.

ಬಾಹ್ಯಾಕಾಶ ಉಪಗ್ರಹ ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದ ವಿಶ್ವದ ನಾಲ್ಕನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಇದಕ್ಕೂ ಮೊದಲು ಅಮೆರಿಕ, ರಷ್ಯಾ ಮತ್ತು ಚೀನಾ ಬಳಿ ಮಾತ್ರ ಈ ತಂತ್ರಜ್ಞಾನವಿತ್ತು.

 

ಬಾಹ್ಯಾಕಾಶ ಗುಪ್ತಚರ ಉಪಗ್ರಹ ಹೊಡೆದುರಳಿಸುವ ತಂತ್ರಜ್ಞಾನವನ್ನು ಭಾರತ ಪಡೆದಿದ್ದು, ಅಂತರೀಕ್ಷ ಸಮರಕ್ಕೂ ಭಾರತ ಸಿದ್ಧವಾಗಿದೆ ಎಂಧು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಭವಿಷ್ಯದಲ್ಲಿ ಉಪಗ್ರಹ ತಂತ್ರಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿದೆ ಎಂದಿರುವ ಪ್ರಧಾನಿ, ಅಂತರೀಕ್ಷದೊಂದಿಗೆ ಜೀವನ ನಡೆಸುವುದು ಭವಿಷ್ಯದಲ್ಲಿ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

ASAT ಕ್ಷಿಪಣಿ ತಂತ್ರಜ್ಞಾನ ಇದೀಗ ಭಾರತದ ಬಳಿ ಇದ್ದು, ದೇಶದ ವಿರುದ್ಧ ಬಾಹ್ಯಾಕಶದಲ್ಲಿ ಗುಪ್ರಚರವೂ ಸೇರಿದಂತೆ ಅಂತರಿಕ್ಷ ಸಮರಕ್ಕೆ ಮುಂದಾಗುವ ದುಸ್ಸಾಹಸವನ್ನು ಯಾರೂ ಮಾಡಲಾರರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Follow Us:
Download App:
  • android
  • ios