Asianet Suvarna News Asianet Suvarna News

ಕಾಣೆಯಾಗಿದ್ದ ವೃದ್ಧ ಫೇಸ್‌ಬುಕ್‌ನಲ್ಲಿ ಪತ್ತೆ

ಗುಜರಾತ್‌ ಮೂಲದ ಮಹೇಂದ್ರ (65) ಪತ್ತೆಯಾದವರು. ಮಹೇಂದ್ರ ಅವರ ಪುತ್ರ ಹಿತೇಶ್‌ ಎಂಬುವರು ನಗರದ ವೈಟ್‌ಫೀಲ್ಡ್‌ನಲ್ಲಿ ಮನೆ ನಿರ್ಮಿಸಿದ್ದು, ಅದರ ಗೃಹ ಪ್ರವೇಶಕ್ಕೆ ಗುಜರಾತ್‌ನಿಂದ ಪೋಷಕರು ಬಂದಿದ್ದರು. ಈ ಮಧ್ಯೆ ಏ.23ರಂದು ಸಂಜೆ 6 ಗಂಟೆ ಸುಮಾರಿಗೆ ಮಹೇಂದ್ರ ಅವರು ಪತ್ನಿಯೊಂದಿಗೆ ವೈಟ್‌ಫೀಲ್ಡ್‌ನ ಬೋರ್‌ವೆಲ್‌ ರಸ್ತೆಯಲ್ಲಿರುವ ಹೇರ್‌ ಸಲೂನ್‌ಗೆ ತೆರಳಿದ್ದರು. ಪತ್ನಿ ತರಕಾರಿ ತರಲು ತರುವಷ್ಟರಲ್ಲಿ ಸಲೂನ್‌ ಅಂಗಯಿಂದ ಮಹೇಂದ್ರ ಕಾಣೆಯಾಗಿದ್ದರು.

Missing Elder Citizen Found Through Facebook
  • Facebook
  • Twitter
  • Whatsapp

ಬೆಂಗಳೂರು (ಏ. 26): ಪುತ್ರನ ಮನೆಯ ಗೃಹ ಪ್ರವೇಶಕ್ಕೆ ಬಂದು ಕಾಣೆಯಾಗಿದ್ದ ವೃದ್ಧರೊಬ್ಬರು ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌' ಸಹಾಯದಿಂದ ಪತ್ತೆಯಾಗಿದ್ದಾರೆ.

ಗುಜರಾತ್‌ ಮೂಲದ ಮಹೇಂದ್ರ (65) ಪತ್ತೆಯಾದವರು. ಮಹೇಂದ್ರ ಅವರ ಪುತ್ರ ಹಿತೇಶ್‌ ಎಂಬುವರು ನಗರದ ವೈಟ್‌ಫೀಲ್ಡ್‌ನಲ್ಲಿ ಮನೆ ನಿರ್ಮಿಸಿದ್ದು, ಅದರ ಗೃಹ ಪ್ರವೇಶಕ್ಕೆ ಗುಜರಾತ್‌ನಿಂದ ಪೋಷಕರು ಬಂದಿದ್ದರು. ಈ ಮಧ್ಯೆ ಏ.23ರಂದು ಸಂಜೆ 6 ಗಂಟೆ ಸುಮಾರಿಗೆ ಮಹೇಂದ್ರ ಅವರು ಪತ್ನಿಯೊಂದಿಗೆ ವೈಟ್‌ಫೀಲ್ಡ್‌ನ ಬೋರ್‌ವೆಲ್‌ ರಸ್ತೆಯಲ್ಲಿರುವ ಹೇರ್‌ ಸಲೂನ್‌ಗೆ ತೆರಳಿದ್ದರು. ಪತ್ನಿ ತರಕಾರಿ ತರಲು ತರುವಷ್ಟರಲ್ಲಿ ಸಲೂನ್‌ ಅಂಗಯಿಂದ ಮಹೇಂದ್ರ ಕಾಣೆಯಾಗಿದ್ದರು.

ಸ್ಥಳೀಯರನ್ನು ವಿಚಾರಿಸದರೂ ಪತಿ ಬಗ್ಗೆ ಮಾಹಿತಿ ಸಿಗುವುದಿಲ್ಲ. ಕೂಡಲೇ ಪುತ್ರ ಹಿತೇಶ್‌ಗೆ ಕರೆ ಮಾಡಿ ತಂದೆ ಕಾಣೆಯಾಗಿರುವ ವಿಷಯ ತಿಳಿಸಿದ್ದಾರೆ. ಮಹೇಂದ್ರ ಅವರಿಗೆ ಬೆಂಗಳೂರಿನ ಪರಿಚಯವಿಲ್ಲ. ಅಲ್ಲದೆ, ಕನ್ನಡ ಬರುವುದಿಲ್ಲ. ನಡೆದುಕೊಂಡೆ ಸುಮಾರು 7-8 ಕಿ.ಮೀ ದೂರ ಕ್ರಮಿಸಿದ್ದಾರೆ. ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಗಾಯಗೊಂಡಿದ್ದರು. ನೋವಿನಿಂದ ಬಳಲಿದ ಅವರು ಬೆಳ್ಳಂದೂರಿನ ಇಕೋಸ್ಪೆಸ್‌ ಬಳಿಯ ಆಟೋ ನಿಲ್ದಾಣದಲ್ಲಿ ಇಡೀ ರಾತ್ರಿ ಕಳೆದಿದ್ದಾರೆ. ಮರುದಿನ ಬೆಳಗ್ಗೆ 8 ಗಂಟೆ ಸುಮಾರಿಗೆ ಆಟೋ ಚಾಲಕರೊಬ್ಬರು ವೃದ್ಧ ಮಹೇಂದ್ರವರನ್ನು ಕಂಡು ಬೆಳ್ಳಂದೂರು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಚಿಕಿತ್ಸೆ ಕೊಡಿಸಿದ್ದರು.

ವೃದ್ಧರೊಬ್ಬರ ಬಗ್ಗೆ ಪೊಲೀಸರು ಕಮ್ಯೂನಿಟಿ ಪೊಲೀಸಿಂಗ್‌ ಸದಸ್ಯ ವಿಕಾಸ್‌ಗೆ ತಿಳಿಸಿದ್ದರು. ಅಲ್ಲದೇ ಹಿತೇಶ್‌ ಸ್ನೇಹಿತರೊಬ್ಬರು ಫೇಸ್‌ಬುಕ್‌ನಲ್ಲಿ ಮಹೇಂದ್ರ ಅವರ ಫೋಟೋ ಹಾಕಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪ್ರಕಟಿಸಿದ್ದರು. ಏ.25ರಂದು ಇದನ್ನು ಗಮನಿಸಿದ ವಿಕಾಸ್‌, ಹಿತೇಶ್‌ಗೆ ಕರೆ ಮಾಡಿ ತಂದೆ ಪತ್ತೆ ಬಗ್ಗೆ ಮಾಹಿತಿ ನೀಡಿದರು. ಬಳಿಕ ಠಾಣೆಗೆ ಬಂದ ಹಿತೇಶ್‌ ಕಾಣೆಯಾಗಿದ್ದ ತಂದೆಯನ್ನು ಕರೆದುಕೊಂಡು ಹೋಗಿದ್ದಾರೆ.

Follow Us:
Download App:
  • android
  • ios