ಮಡಿಕೇರಿ ತಾಲೂಕಿನ ಗಾಳಿಬೀಡು ಕಾಲೂರು ಕಟ್ಟೆಕಲ್ಲು ಬಳಿ ಈ ಘಟನೆ ನಡೆದಿದ್ದು, ಕೆಎ-09-ಎಫ್ -52 05 ನಂಬರಿನ ಬಸ್ ಗಾಜುಗಳು ಪುಡಿ-ಪುಡಿಯಾಗಿವೆ. ಎರಡು ಬೈಕ್'ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆ ಬದಿ ನಿಂತಿದ್ದ ಬಸ್ ಮುಂಭಾಗದ ಗಾಜುನ್ನು ಧ್ವಂಸಗೊಳಿಸಿದ್ದಾರೆ.
ಕೊಡಗು(ನ.10): ಮಡಿಕೇರಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿಕಿಡಿಗೇಡಿಗಳು KSRTC ಬಸ್'ಗೆ ಕಲ್ಲುತೂರಿದ ಘಟನೆ ನಡೆದಿದೆ.
ಮಡಿಕೇರಿ ತಾಲೂಕಿನ ಗಾಳಿಬೀಡು ಕಾಲೂರು ಕಟ್ಟೆಕಲ್ಲು ಬಳಿಈ ಘಟನೆನಡೆದಿದ್ದು, ಕೆಎ-09-ಎಫ್ -52 05 ನಂಬರಿನ ಬಸ್ ಗಾಜುಗಳು ಪುಡಿ-ಪುಡಿಯಾಗಿವೆ. ಎರಡು ಬೈಕ್'ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆ ಬದಿ ನಿಂತಿದ್ದ ಬಸ್ ಮುಂಭಾಗದ ಗಾಜುನ್ನು ಧ್ವಂಸಗೊಳಿಸಿದ್ದಾರೆ. ಅದೃಷ್ಟವಶಾತ್ ಬಸ್'ನಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಯಾರಿಗೂ ಗಾಯಾಳುಗಳಾಗಿರುವ ಕುರಿತಂತೆ ವರದಿಯಾಗಿಲ್ಲ.
ಮತ್ತೊಂದೆಡೆ ಮಡಿಕೇರಿ ತಾಲೂಕಿನ ಕಡಗದಾಳು ಬಳಿ ಕಿಡಿಗೇಡಿಗಳು ರಸ್ತೆಗೆ ಅಡ್ಡಲಾಗಿ ಮರ ಉರುಳಿಸಿ ರಸ್ತೆಸಂಚಾರ ಅಸ್ತವ್ಯಸ್ತಗೊಳಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕಾಗಮಿಸಿ, ರಸ್ತೆ ತೆರವು ಮಾಡಿದ್ದಾರೆ.
