ಉಗ್ರರೊಂದಿಗಿನ ಕಾದಾಟದಲ್ಲಿ 9 ಗುಂಡೇಟು ತಿಂದಿದ್ದ ಯೋಧ ಚೇತನ್, ಸಾವನ್ನೂ ಗೆದ್ದಿದ್ದಾರೆ. ವೈದ್ಯರೇ ಅಚ್ಚರಿ ಪಡುವ ರೀತಿಯಲ್ಲಿ ಸಾವನ್ನೂ ಗೆದ್ದಿದ್ದಾರೆ.

ನವದೆಹಲಿ(ಎ.05): ಉಗ್ರರೊಂದಿಗಿನ ಕಾದಾಟದಲ್ಲಿ 9 ಗುಂಡೇಟು ತಿಂದಿದ್ದ ಯೋಧ ಚೇತನ್, ಸಾವನ್ನೂ ಗೆದ್ದಿದ್ದಾರೆ. ವೈದ್ಯರೇ ಅಚ್ಚರಿ ಪಡುವ ರೀತಿಯಲ್ಲಿ ಸಾವನ್ನೂ ಗೆದ್ದಿದ್ದಾರೆ.

ಐಸಿಯುನಲ್ಲಿ ಕೋಮಾದಲ್ಲಿದ್ದ ಚೇತನ್ ಕುಮಾರ್ ಚೀತಾ, ಕೋಮಾದಿಂದ ಹೊರಬಂದಿದ್ದಾರೆ. ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಜಿನ್ ಏರಿಯಾದಲ್ಲಿ ಉಗ್ರರ ಅಡಗುದಾಣದ ಮೇಲೆ ದಾಳಿ ನಡೆದಿತ್ತು. ಈ ವೇಳೆ ನಡೆದ ಎನ್'ಕೌಂಟರ್'ನಲ್ಲಿ ಚೇತನ್ ಕುಮಾರ್ ತೀವ್ರ ಗಾಯಗೊಂಡಿ ಚೇತನ್ ಕುಮಾರ್'ರನ್ನು ದೆಹಲಿಯ ಏಮ್ಸ್ ಆಸ್ಪತ್ರಗೆ ದಾಖಲಿಸಲಾಗಿತ್ತು.

ಕೋಮಾದಲ್ಲಿದ್ದ ಈ ಯೋಧ ಸತತ ಒಂದು ತಿಂಗಳು ಐಸಿಯುನಲ್ಲಿದ್ದರು. ಇಂದು ವೈದ್ಯರು ಯೋಧನ ಆರೋಗ್ಯದ ಮಾಹಿತಿ ಬಿಡುಗಡೆ ಮಾಡಿದ್ದು, ಇವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ.

ಇವರನ್ನು ಕೇವಲ 24 ಗಂಟೆಯೊಳಗೆ ಆಪರೇಷನ್ ಮಾಡಿ, ತಲೆಗೆ ಬಿದ್ದಿದ್ದ ಬುಲೆಟ್​'ನ ಚೂರುಗಳನ್ನು ತೆಗೆಯಲಾಗಿತ್ತು. ಆದರೆ, ಮೆದುಳಿನಲ್ಲಿ ಇನ್​'ಫೆಕ್ಷನ್ ಆಗುವ ಸಾಧ್ಯತೆ ಇದ್ದ ಕಾರಣ, ವಿಶೇಷ ನಿಗಾವಹಿಸಲಾಗಿತ್ತು.